ಕಾಸರಗೋಡು: 20 ಕೋಲು ಆಳದ ಬಾವಿಗೆ ಬಿದ್ದ ಆಡನ್ನು ಅಗ್ನಿಶಾಮಕ ದಳ ಸಿಬಂದಿಗಳು ರಕ್ಷಸಿದ ಘಟನೆ ನಡೆದಿದೆ. ಮೊಗ್ರಾಲು ಪುತ್ತೂರು ಬಳಿಯ ಖಾಸಗಿ ವ್ಯಕ್ತಿಯ ಮನೆಯ ಪರಿಸರದಲ್ಲಿರುವ ಆವರಣವಿಲ್ಲದ ಬಾವಿಗೆ ಆಡು ಬಿದ್ದಿತ್ತು. 20 ಕೋಲು ಆಳದ ಬಾವಿಯಲ್ಲಿ 15 ಕೋಲು ನೀರು ತುಂಬಿತ್ತು. ಮಾಹಿತಿ ತಿಳಿದು ಕಾಸರಗೋಡು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿ ವಿ.ಎನ್.ವೇಣುಗೋಪಾಲ್ ಅವರ ನೇತೃತ್ವದ ಸಿಬಂದಿಗಳು ಆಗಮಿಸಿದ್ದರು.
ಇನ್ನೋರ್ವ ಅಧಿಕಾರಿ ಲಿ.ಸಿ.ಸಿರಾಜುದ್ದೀನ್ ಬಾವಿಗಿಳಿದಿ ಆಡನ್ನು ಮೇಲಕ್ಕೆ ತಂದರು. ಅಗ್ನಿಶಾಮಕ ದಳದ ಇತರ ಸಿಬಂದಿಗಳಾದ ಇ.ಪ್ರಸೀದ್, ಎಸ್.ಅರುಣ್ ಕು.ಅರ್, ಅಖಿಲ್ ಅಶೋಕನ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು


0 Comments