Ticker

6/recent/ticker-posts

Ad Code

ಅತಿ ತೀವ್ರ ಮಳೆಯಿಂದ ದಿಡೀರನೆ ಉಂಟಾದ ಪ್ರವಾಹ, ಮಂಜೇಶ್ವರ ಬಳಿ ಕೊಚ್ಚಿ ಹೋದ ಕಾರು, ಬೈಕು, ಸ್ಕೂಟರುಗಳು


 ಮಂಜೇಶ್ವರ: ಭಾರೀ ಮಳೆಯ ಹಿನ್ನೆಲೆಯಲ್ಲಿ ಕಾರು ಮತ್ತು ಸ್ಕೂಟರು ಮಳೆ ನೀರಿನೊಂದಿಗೆ ಕೊಚ್ಚಿ ಹೋದ ಘಟನೆ ಮಂಜೇಶ್ವರ ಬಳಿಯ ಮಜಿಬೈಲು, ಪಟ್ಟತ್ತೂರಿನಲ್ಲಿ ನಡೆದಿದೆ.  ಮನೆಗಳಿಗೆ ಸಾಗಲು ಆಗದ ಕಾರಣ ವಾಹನಗಳನ್ನು  ಬಯಲು ಬಳಿಯ ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿತ್ತು. ನಿನ್ನೆ (ಗುರುವಾರ) ರಾತ್ರಿ  ತೀವ್ರ ಮಳೆಯ ಹಿನ್ನೆಲೆಯಲ್ಲಿ ಈ ರಸ್ತೆಯೇ ಕೊಚ್ಚಿ ಹೋಗಿದ್ದು  ನಿಲ್ಲಿಸಿದ ವಾಹನಗಳು ಮಳೆ ನೀರಿನೊಂದಿಗೆ ಕೊಚ್ಚಿ ಹೋದ ಬಗ್ಗೆ ಇಂದು (ಶುಕ್ರವಾರ) ಬೆಳಗ್ಗೆಯಷ್ಟೆ ಜನರ ಗಮನಕ್ಕೆ ಬಂದಿತ್ತು. ಕೊಚ್ಚಿ ಹೋದ ಕಾರು ಬಯಲಿನಲ್ಲಿ‌ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅರ್ಪಿತ್ ಎಂಬವರ ಕಾರು ಇದಾಗಿದೆ. ಶಿವಪ್ರಸಾದ್, ವಿಕಿತ್ ಎಂಬಿವರ ದ್ವಿಚಕ್ರ ವಾಹನಗಳೂ ಕೊಚ್ಚಿ ಹೋಗಿವೆ.

Post a Comment

0 Comments