Ticker

6/recent/ticker-posts

Ad Code

ಬೆದ್ರಂಪಳ್ಳದಲ್ಲಿ ಲಹರಿ ವಿರುದ್ದ ಶಿಬಿರ, ಸಿವಿಲ್ ಎಕ್ಸೈಸ್ ಇನ್ಸ್ಪೆಕ್ಟರ್ ಜನಾರ್ಧನ ಎನ್.ಅವರಿಂದ ತರಗತಿ


 ಪೆರ್ಲ:  ಬೆದ್ರಂಪಳ್ಳ ನೂರು ಹುದಾ ಮದ್ರಸಾದಲ್ಲಿ ಲಹರಿ ವಿರುದ್ದ  ಶಿಬಿರ ನಡೆಯಿತು. ಸದರ್ ಮುಅಲ್ಲೀಂ ಅಬೂಬಕರ್ ಲತೀಫಿಯವರ ಅಧ್ಯಕ್ಷತೆಯಲ್ಲಿ ಮಹಲ್ ಖತೀಬ್ ಹಸೈನಾರ್ ಮಿಸ್ಬಾಹಿ ಕಾಮಿಲ್ ಸಖಾಫಿ ಉದ್ಘಾಟಿಸಿದರು.ಲಹರಿಯನ್ನು ಹಿಂದಿಕ್ಕುವ, ಉತ್ತಮ ನಡರೆಯಲ್ಲಿ ಮುಂದೆ ಸಾಗುವ ಎಂಬ ವಿಷಯದಲ್ಲಿ ಸಿವಿಲ್ ಎಕ್ಸೈಸ್ ಇನ್ಸ್ಪೆಕ್ಟರ್ ಜನಾರ್ಧನ ಎನ್.ತರಗತಿ ನಡೆಸಿದರು. ಶಿಬಿರದಲ್ಲಿ ಅಸ್ಲಂ ಅಲ್ ಬದವಿ ಸ್ವಾಗತಿಸಿದರು. ಅಬ್ದು ರಹಿಮಾನ್ ಮಾಸ್ತರ್ ಶುಭ ಹಾರೈಸಿದರು. ಜಮಾಅತ್ ಅಧ್ಯಕ್ಷ ಅಮಿದಾಜಿ ಎನ್, ಹಮೀದ್ ಬಿ, ರಸಾಕ್ ಬಿ, ಹಾರಿಸ್.ಸಿ.ಎಚ್, ಅಶ್ರಫ್, ಖಾದರ್ ಪಿ.ಕೆ, ಸಿದ್ದಿಖ್ ಮೊದಲಾದವರು ಭಾಗವಹಿಸಿದರು. ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಶಿಬಿರ ರಾತ್ರಿ 9 ಕ್ಕೆ ಕೊನೆಗೊಂಡಿತು.

Post a Comment

0 Comments