Ticker

6/recent/ticker-posts

ಧರ್ಮದ ಮೂಲ ಸ್ತ್ರೀ, ಧರ್ಮವನ್ನು ಕಾಪಾಡುವವಳು ಸ್ತ್ರೀ –ದೇಲಂಪಾಡಿ ಕ್ಷೇತ್ರದಲ್ಲಿ ಸಾಧ್ವಿ ಮಾತಾನಂದಮಯಿ


 ದೇಲಂಪಾಡಿ:   ಧರ್ಮದ ಮೂಲ ಸ್ತ್ರೀ ಹಾಗೂ ಧರ್ಮವನ್ನು ಕಾಪಾಡುವವಳೂ ಸ್ತ್ರೀ. ಒಂದೇ ಸಮಯದಲ್ಲಿ ಹಲವಾರು ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಹೆಣ್ಣು ಶಕ್ತಿ ಸ್ವರೂಪಿಣಿಯಾಗಿದ್ದಾಳೆ ಎಂದು ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರು ಇಲ್ಲಿನ ಪರಮಪೂಜ್ಯ ಸಾಧ್ವಿ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡಿದರು. ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಮಾತೃ ಸಂಗಮದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು. ಪ್ರಸ್ತುತ ಕಾಲಘಟ್ಟದಲ್ಲಿ ಸ್ತ್ರೀ ತನ್ನತನವನ್ನು ಮರೆತು ವ್ಯವಹರಿಸುವುದು ವಿಪರ್ಯಾಸ, ಅದಕ್ಕಾಗಿ ಮುಂದಿನ ಪೀಳಿಗೆಯ ಹೆಣ್ಣುಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿ ಮಾದರಿ ಸ್ತ್ರೀಶಕ್ತಿಯನ್ನು ಸಮಾಜಕ್ಕೆ ನೀಡಬೇಕು ಎಂದು ಅವರು ಹೇಳಿದರು.  ಭಗವಂತನ ಸಾನಿಧ್ಯ ಇರುವಂತಹ ಕ್ಷೇತ್ರಗಳಿಗೆ ಮಕ್ಕಳನ್ನು ಕರೆತಂದು ಮಕ್ಕಳಲ್ಲಿ ಭಕ್ತಿಯ ಬೀಜವನ್ನು ಬಿತ್ತಬೇಕು ಎಂದದು ಅಧ್ಯಕ್ಷ ಭಾಷಣ ಮಾಡಿ ಮಾತನಾಡಿದ ಖ್ಯಾತ ಪ್ರಸೂತಿ ತಜ್ಞೆ ಡಾ| ಶಾಂಭವಿ ಹೇಳಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಮಲಾಕ್ಷಿ, ಪುತ್ತಿಗೆ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಜಯಂತಿ ಪೊನ್ನೆಂಗಳ, ಮಂಜೇಶ್ವರ ಗ್ರಾಮ ಪಂಚಾಯತಿ ಸದಸ್ಯೆ ಚಂದ್ರಾವತಿ ಮುರಳಿ ಬಾಯಾರು ಅತಿಥಿಗಳಾಗಿ ಆಗಮಿಸಿದ್ದರು.


ಪುಷ್ಪತಲಾ ಸುಬ್ಬಯ್ಯ ರೈ, ಅನಿತಾ ಮಂಟಪಾಡಿ ಉಪಸ್ಥಿತರಿದ್ದರು. 



ಮಾತೃ ಸಮಿತಿ ಅಧ್ಯಕ್ಷೆ ಸಾವಿತ್ರಿ ಟೀಚರ್ ಸ್ವಾಗತಿಸಿ,ಮಾತೃ ಸಮಿತಿ ಪ್ರಧಾನ ಸಂಚಾಲಕಿ ಪ್ರೇಮಾ ಎಸ್ ರೈ ವಂದಿಸಿದರು. ವಿಜಯಲಕ್ಷ್ಮಿ ಶಂನಾಡಿಗ ಕುಂಬಳೆ ನಿರೂಪಿಸಿದರು.

Post a Comment

0 Comments