Ticker

6/recent/ticker-posts

Ad Code

ಕಾಸರಗೋಡಿನಲ್ಲಿ ಭಜನಾ ಪರಿಷತ್ ಏಕದಿನ ಭಜನಾ ಕಮ್ಮಟಕ್ಕೆ ನಿರ್ಧಾರ


 ಕಾಸರಗೋಡು : ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಕಾಸರಗೋಡು ತಾಲೂಕು ವಿಶೇಷ ಸಭೆ ಆದಿತ್ಯವಾರದಂದು ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಜರಗಿತು.

ಭಜನಾ ಪರಿಷತ್ ಕಾಸರಗೋಡು ವಲಯ ಅಧ್ಯಕ್ಷರಾದ ಡಾ. ಶ್ರೀ ಎನ್ ವೆಂಕಟ್ರಮಣ ಹೊಳ್ಳ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಭಜನಾ ಪರಿಷತ್ ಜಿಲ್ಲಾ ಸಮನ್ವಯ ಅಧಿಕಾರಿ ಸಂತೋಷ್ ಅಳಿಯೂರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಕಾಸರಗೋಡು,ಮಂಜೇಶ್ವರ ತಾಲೂಕುಗಳಲ್ಲಿ ವಿವಿಧ ವಲಯಗಳಾಗಿ ವಿಂಗಡಿಸಿ ಅದರಲ್ಲಿ ಈ ಭಜನಾ ಪರಿಷತ್  ಕಾಸರಗೋಡಿನಲ್ಲಿ ಮೊತ್ತ ಮೊದಲ ಬಾರಿಗೆ ನಡೆಯುವ ಭಜನಾ ಕಮ್ಮಟಕ್ಕೆ ನಾಡಿನ ಎಲ್ಲಾ ಭಜನಾ ಸಂಘಗಳು,ಭಜನಾ ಪರಿಷತ್ ನ ಎಲ್ಲಾ ಸದಸ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಪೂರ್ಣ ಸಹಕಾರನೀಡ ಬೇಕೆಂದು ವಿನಂತಿಸಿದರು. ಭಜನಾ ಪರಿಷತ್ ಗೌರವಧ್ಯಕ್ಷರಾದ ಶ್ರೀ ಜಯಾನಂದ ಕುಮಾರ್ ಹೊಸದುರ್ಗ ಅವರು ಇದೇ ಬರುವ ಜೂನ್  01.06.2025ರಂದು ಕಾಸರಗೋಡಿನಲ್ಲಿ ಒಂದು ದಿವಸದ ಭಜನಾ ಕಮ್ಮಟ ಕಾರ್ಯಕ್ರಮವನ್ನು ನಡೆಸುವುದಾಗಿ ತಿಳಿಸಿದರು.

ಸಭೆಯಲ್ಲಿ ಮಂಜೇಶ್ವರ ವಲಯ ಭಜನಾ ಪರಿಷತ್ ಅಧ್ಯರಾದ ಶ್ರೀ ದಿನೇಶ್ ಚೆರುಗೋಳಿ, ವಿವಿಧ ಭಜನಾ ಸಂಘದ ಸದಸ್ಯರು ಹಾಗೂ ಗಣ್ಯವ್ಯಕ್ತಿಗಳು ಉಪಸ್ಥಿತರಿದ್ದರು. ರೋಹಿತ್ ಮಧೂರು ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments