ಮುಂಡಿತ್ತಡ್ಕ : ಸುಮಾರು ಎರಡು ಸಾವಿರ ವರ್ಷಗಳ ಪುರಾತನ ಐತಿಹ್ಯವುಳ್ಳ ಮುಗು,ಶೇಣಿ ಎರಡು ಗ್ರಾಮಗಳ ಕಾರಣೀಕ ಪ್ರಸಿದ್ಧ ಕ್ಷೇತ್ರಮುಗು ಶ್ರೀ ಸುಬ್ರಾಯ ದೇವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಕ್ಷೇತ್ರದಲ್ಲಿ ಅನುಜ್ಞಾ ಕಲಶ ಹಾಗೂ ಶ್ರೀ ದೇವರ ಬಾಲಾಲಯ ಪ್ರತಿಷ್ಠೆಯು ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಯವರ ನೇತೃತ್ವದಲ್ಲಿ ರವಿವಾರ ಜರಗಿತು.
ಇದರ ಅಂಗವಾಗಿ ಶನಿವಾರ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹವಾಚನ ಸ್ಥಳ ಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ ಜರಗಿತು
ರವಿವಾರದಂದು ಪ್ರಾತಃಕಾಲ ಗಣಪತಿ ಹೋಮ,ಅನುಜ್ಞಾಕಲಶ ಪೂಜೆ ಅನುಜ್ಞಾ ಕಲಶಾಭಿಷೇಕ ಬಳಿಕ ಸುಬ್ರಾಯ ದೇವರ ಹಾಗೂ ಪರಿವಾರ ದೇವರ ಚೈತನ್ಯ ಉದ್ವಾಸನೆ, ಹಾಗೂ ಬಾಲಾಲಯ ಪ್ರತಿಷ್ಠೆ, ಮಹಾಪೂಜೆ ಜರಗಿತು.
ಈ ಸಂದರ್ಭ ಧಾರ್ಮಿಕ ಮುಂದಾಳು ಮಹಾಬಲೇಶ್ವರ ಭಟ್ ಎಡಕ್ಕಾನ, ಉದ್ಯಮಿ ದಾನಿ ವಸಂತ ಪೈ ಬದಿಯಡ್ಕ,ದೇಲಂಪಾಡಿ ಮಹಾಲಿಂಗೇಶ್ವರ ಕ್ಷೇತ್ರ ಕಾರ್ಯಧ್ಯಕ್ಷ ಡಿ.ದಾಮೋದರ, ಪದ್ಮನಾಭ ಆಚಾರ್ಯ ಬಾಡೂರು,ವಾಸ್ತು ಶಿಲ್ಪಿ ರಂಜಿತ್ ಉದುಮ,ಕಾಷ್ಠ ಶಿಲ್ಪಿ ವಿಷ್ಣು ಆಚಾರ್ಯ,ನಿರ್ಮಾಣ ಶಿಲ್ಪಿ ಶೇಸಪ್ಪ ಕುಲಾಲ್ ಹಾಗೂ ಕ್ಷೇತ್ರ ಆಡಳಿತ ಸಮಿತಿ,ಸೇವಾ ಸಮಿತಿ,ಜೀರ್ಣೋದ್ಧಾರ ಸಮಿತಿ, ಯುವಕ ಸಂಘ,ಮಹಿಳಾ ಸಮಿತಿ ಪದಾಧಿಕಾರಿಗಳು
0 Comments