ಉಪ್ಪಳ: ಬೇಕೂರು ಶಾಂತಿಗುರಿ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮೂಕಾಂಬಿಕಾ ದೇವಿಯ ಪೀಠ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪರಿವಾರ ಸಾನ್ನಿಧ್ಯಗಳ ಪ್ರತಿಷ್ಠೆ ಮತ್ತು ಕಲಶಾಭಿಷೇಕ ಶನಿವಾರ ಆರಂಭಗೊಂಡಿದೆ.
ಕಾರ್ಯಕ್ರಮದ ಅಂಗವಾಗಿ ಭವ್ಯ ಹೊರೆ ಕಾಣಿಕೆ ಮೆರವಣಿಗೆಯು ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಹೊರಟು ಶ್ರೀ ಕ್ಷೇತ್ರಕ್ಕೆ ತಲುಪಿತು. ಸಾಯಂಕಾಲ ಉಗ್ರಾಣ ಮುಹೂರ್ತ ನಡೆಯಿತು. ಬಳಿಕ ವಿವಿಧ ತಂಡಗಳಿಂದ ಕುಣಿತ ಭಜನೆ ಜರಗಿತು.ರಾತ್ರಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ ಪ್ರದರ್ಶನಗೊಂಡಿತು. ರವಿವಾರ
ಬೆಳಿಗ್ಗೆ ತಂತ್ರಿವರ್ಯ ನಡಿಬೈಲು ಶಂಕರನಾರಾಯಣ ಅವರ ನೇತೃತ್ವದಲ್ಲಿ ಗಣಪತಿ ಹವನ, ಪ್ರಾಯಶ್ಚಿತ್ತಾದಿಗಳು, ಶಾಂತಿಹೋಮ, ನವಗ್ರಹಶಾಂತಿ ಹೋಮ, ಬಿಂಬಶುದ್ಧಿ, ಬಾಲಾಲಯದಲ್ಲಿ ಪೂಜೆ, ಅನುಜ್ಞಾ ಕಲಶ, ಬಾಲಾಲಯ ವಿಸರ್ಜನೆ ಮೊದಲಾದ ತಾಂತ್ರಿಕ ವಿಧಿ ವಿಧಾನಗಳು ಜರಗಿದವು. ಬಳಿಕ ವಿವಿಧ ತಂಡಗಳಿಂದ ಭಜನೆ ನಡೆಯಿತು. ಮಧ್ಯಾಹ್ನ ಹರೀಶ ಆಚಾರ್ಯ ಕುಂಬಳೆ, ಮಂಗಳೂರು ಪ್ರಾಯೋಜಕತ್ವದಲ್ಲಿ ಹಳೆಯಂಗಡಿ ಸುರೇಶ ಆಚಾರ್ಯ ಮತ್ತು ಬಳಗದವರಿದ "ದಾಸಸಂಕೀರ್ತನೆ".ಬಳಿಕ ವಿವಿಧ ತಂಡಗಳಿಂದ ಭಜನೆ ಸಂಕೀರ್ತನೆ ಜರಗಿತು.ಕೊಡುಗೈದಾನಿ ,ಧಾರ್ಮಿಕ ಕ್ಷೇತ್ರದ ಹರಿಕಾರ ಕುಳೂರು ಕನ್ಯಾನ ಡಾ. ಸದಾಶಿವ ಶೆಟ್ಟಿ ರವಿವಾರ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಈ ಸಂದರ್ಭ ಕೊಡುಗೆಯಾಗಿ ನೀಡಿದ ಶಾಶ್ವತ ಚಪ್ಪರ ಉದ್ಘಾಟಿಸಿದರು.ಬ್ರಹ್ಮಕಲಶೋತ್ಸವದ ಯಶಸ್ವಿಗೆ ವಿವಿಧ ಸಮಿತಿಗಳು ಹಾಗೂ ಮುಂದಾಳುಗಳು ಆಹೋರಾತ್ರಿ ಸೇವಾ ನಿರತರಾಗಿದ್ದು, ಹಲವಾರು ಕೊಡುಗೈದಾನಿಗಳು ಕ್ಷೇತ್ರಕ್ಕೆ ಭೇಟಿ ನೀಡಿ ಆರ್ಥಿಕ,ವಸ್ತು ರೂಪ ಸಹಿತ ಸಹಕಾರ ನೀಡಿ ಕೃತಾರ್ಥರಾಗುತ್ತಿದ್ದಾರೆ.
0 Comments