Ticker

6/recent/ticker-posts

Ad Code

ಮಣಿಪುರ ಹಿಂಸಾಚಾರದ ಮುಖ್ಯ ಆರೋಪಿಯನ್ನು ತಲಶೇರಿಯಿಂದ ಬಂಧಿಸಿದ ಎನ್.ಐ.ಎ.ಅಧಿಕಾರಿಗಳು


 ಕಣ್ಣೂರು: ಮಣಿಪುರ ಹಿಂಸಾಚಾರ ಪ್ರಕರಣದ ಮುಖ್ಯ ಆರೋಪಿಯನ್ನು ಕೇರಳದ ತಲಶೇರಿಯಿಂದ ಎನ್.ಐ.ಎ.ಅಧಿಕಾರಿಗಳು ಬಂಧಿಸಿದ್ದಾರೆ. ಮೈದೈ ವಿಭಾಗದ ಸಕ್ರಿಯ ಸದಸ್ಯ, ಹಲವು ಹಿಂಸಾಚಾರಗಳಿಗೆ ನೇತೃತ್ವ ನೀಡಿದ ರಾಜಕುಮಾರ್ ಮೈಪಾಕ್ ಸಂಘ್ ಎಂಬಾತ ಬಂಧಿತ ಆರೋಪಿ. ದೆಹಲಿಯಿಂದ ಆಗಮಿಸಿದ ಎನ್.ಐ.ಎ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.

  ಆರೋಗ್ಯ ಅಧಿಕಾರಿಗಳ ವೇ಼ ಧರಿಸಿ ಎನ್.ಐ.ಎ.ಅಧಿಕಾರಿಗಳು ಆರೋಪಿ ವಾಸಿಸುವ ಬಾಡಿಗೆ ಕೋಣೆಗೆ ಆಗಮಿಸಿದ್ದರು.ಮಳೆಗಾಲ ಪೂರ್ವ ರೋಗ ಹರಡುವಿಕೆಯ ಬಗ್ಗೆ ತಿಳುವಳಿಕೆ ‌ಮೂಡಿಸುವ ಉದ್ದೇಶವೆಂಬಂತೆ ಬಂದ ಅಧಿಕಾರಿಗಳು ಆರೋಪಿಯನ್ನು ಗುರುತು ಹಚ್ಚಿ ಬಂಧಿಸಿದರು.

Post a Comment

0 Comments