ಕಾಸರಗೋಡು: ಬಿಜೆಪಿ ಮಧೂರು ಈಸ್ಟ್, ವೆಸ್ಟ್ ಪಂಚಾಯತು ಸಮಿತಿಗಳ ಪದಾಧಿಕಾರಿಗಳ ಪದಗ್ರಹಣ ಸಭೆ ನಡೆಯಿತು. ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನಿಲ್ ಉದ್ಘಾಟಿಸಿದರು.
ಅವರು ಮಾತನಾಡಿ ಕೇಂದ್ರ ನಿಧಿಯ ಹಕ್ಕು ಸ್ಥಾಪಿಸಿ ಅದರ ಲಾಭ ಪಡೆಯಲು ಕೇರಳದ ಎಡ,ಬಲ ರಂಗಗಳುಪ್ರಯತ್ನಿಸುತ್ಯಿವೆ ಎಂದು ದೂರಿದರು. ವಿಯಿಞಂ ಯೋಜನೆ ಮೊಟಕುಗೊಳಿಸಲು ಯತ್ನಿಸಿದ ಪಿಣರಾಯಿ ವಿಜಯನ್ ಮತ್ತು ಸಂಗಡಿಗರು ಇಂದು ಆ ಯೋಜನೆಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಇದೇ ವೇಳೆ ರಾಜೀವ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ವಿಕಸಿತ ಕೇರಳ ಸಂಕಲ್ಪ ಸಾಕ್ಷಾತ್ಕಾರಗೊಳ್ಳುತ್ತಿದೆ ಎಂದವರು ಹೇಳಿದರು.
ಮಧೂರು ಈಸ್ಟ್ ಅಧ್ಯಕ್ಷ ಮಾಧವ ಮಾಸ್ಯರ್ ಅಧ್ಯಕ್ಷತೆ ವಹಿಸಿದರು. ಮಂಡಲ ಅಧ್ಯಕ್ಷ ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ಶ್ರೀಧರ ಕೂಡ್ಲು, ಮಧೂರು ಗ್ರಾಮ ಪಂಚಾಯತು ಅಧ್ಯಕ್ಷ ಗೋಪಾಲಕೃಷ್ಣನ್, ಎನ್.ಸತೀಷ್, ಪುಷ್ಪಾ ಗೋಪಾಲನ್, ರವಿ ಗಟ್ಟಿ ಮೊದಲಾದವರು ಮಾತನಾಡಿದರು. ಶಶಿಧರ ಸ್ವಾಗತಿಸಿ ಧನಂಜಯ ಮಧೂರು ವಂದಿಸಿದರು
0 Comments