Ticker

6/recent/ticker-posts

ನಾಡ ಕೋಳಿ ಸಾಕಣಾ ಕೇಂದ್ರಕ್ಕೆ ಬೀದಿ ನಾಯಿಗಳ ದಾಳಿ, 50 ಕ್ಕೂ ಹೆಚ್ಚು ಕೋಳಿಗಳ ಹತ್ಯೆ


 ಮಧೂರು: ನಾಡ ಕೋಳಿ ಸಾಕಣಾ ಕೇಂದ್ರಕ್ಕೆ ದಾಳಿ ನಡೆಸಿದ ಬೀದಿ ನಾಯಿಗಳು 50 ರಷ್ಟು  ಕೋಳಿಗಳನ್ನು, ಬಾತುಕೋಳಿಗಳನ್ನು ಕೊಂದು ಹಾಕಿದೆ. ಮಧೂರು, ಪಟ್ಲ ಚೆನ್ನಿಕೂಡಲು ಬಳಿಯ ತೋಟದಲ್ಲಿರುವ ನಾಡ ಕೋಳಿ ಸಾಕಣಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಕೋಳಿ ಸಾಕಣಾ ಕೇಂದ್ರವನ್ನು ದ್ವಂಸಗೈಯ್ಯಲಾಗಿದೆ.

   ತಲಾ 5 ಸಾವಿರ ರೂ ಬೆಲೆಯ ಉತ್ತಮ ತಳಿಯ 5 ಕೋಳಿಗಳೂ ಬೀದಿ ನಾಯಿಗಳಿಗೆ ಆಹಾರವಾಗಿವೆ.ಕೋಳಿ ಸಾಕಣಾ ಕೇಂದ್ರವು ಮಧೂರು ಕಲ್ಲಕಟ್ಟ ನಿವಾಸಿ ಸಫ್ವಾನ್ ಎಂಬವರ ಮಾಲಕತ್ವದಲ್ಲಿದೆ.  ಇಂದು (ಶುಕ್ರವಾರ) ಮುಂಜಾನೆ 5 ಗಂಟೆಗೆ ಘಟನೆ ನಡೆದಿರಬೇಕು ಎಂದು ಸಂಶಯಿಸಲಾಗಿದೆ. ಬೀದಿ ನಾಯಿಗಳ‌ ನಿಗ್ರಹಕ್ಕೆ  ಸಂಬಂಧಪಟ್ಟವರು ಕ್ರಮ ಕೈಗೊಳ್ಲಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ

Post a Comment

0 Comments