ತಿರುವನಂತಪುರಂ: ದೇಶದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ 7121 ಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ 306 ಮಂದಿಗೆ ರೋಗ ದೃಡೀಕರಣಗೊಳ್ಳುವದರೊಂದಿಗೆ ಒಟ್ಟು ರೋಗಿಗಳ ಸಂಖ್ಯೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 6 ಮಂದಿ ಕೋವಿಡ್ ದೃಡೀಕರಣಗೊಂಡವರು ಮೃತಪಟ್ಟಿದ್ದಾರೆ. ಕೇರಳದಲ್ಲಿ 3, ಕರ್ಣಾಟಕದಲ್ಲಿ 2, ಮಹಾರಾಷ್ಡ್ರದಲ್ಲಿ ಓರ್ವರು ಮೃತಪಟ್ಟಿದ್ದಾರೆ. ಕೇರಳದಲ್ಲಿ ಒಟ್ಟು 2223 ಕೋವಿಡ್ ರೋಗ ಪೀಡಿತರಿದ್ದಾರೆ. ಗುಜರಾತ್ ನಲ್ಲಿ 1223, ಕರ್ಣಾಟಕದಲ್ಲಿ 459 ಮಂದಿಗೆ ರೋಗ ದೃಡೀಕರಣಗೊಂಡಿದೆ.
ಕೋವಿಡ್ 19 ರೋಗಿಗಳ ಸಂಖ್ಯೆ ಹೆಚ್ಚಾಗುವುದರೊಂದಿಗೆ ಆರೋಗ್ಯ ಇಲಾಖೆ ಎಚ್ಚರ ವಹಿಸಲು ವಿನಂತಿಸಿದೆ
0 Comments