Ticker

6/recent/ticker-posts

Ad Code

ಪೆರ್ಲದಲ್ಲಿ ಯೋಗಾಭಿನಮನಂ' ವೈಶಿಷ್ಟಮಯ ಕಾರ್ಯಕ್ರಮ


ಪೆರ್ಲ : ಸಾಂದೀಪನಿ ಯೋಗ ಸೇವಾಲಯ  ಪಳ್ಳತ್ತಡ್ಕ,  ಉಕ್ಕಿನಡ್ಕ ಆಯುರ್ವೇದ ಆಸ್ಪತ್ರೆ, ಹಾಗೂ ಹಲವು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ  ಪೆರ್ಲದ ಭಾರತಿ ಸದನದಲ್ಲಿ ವಿಶ್ವ ಯೋಗ ದಿನಾಚರಣೆ 'ಯೋಗಾಭಿನಮನಂ' ಆಚರಿಸಲಾಯಿತು. ಒಂದು ವಾರಗಳ ಕಾಲ ಮಹಿಳೆಯರು ಮತ್ತು ಮಕ್ಕಳಿಗಾಗಿ  ಡಾ. ಸಪ್ನಾ ಜೆ ಉಕ್ಕಿನಡ್ಕ ನೇತೃತ್ವದಲ್ಲಿ ಉಚಿತ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಪುರುಷರಿಗಾಗಿ ಒಂದು ವಾರಗಳ ಯೋಗ ತರಗತಿಯನ್ನು ಯೋಗ ಗುರು ಶ್ರೀ ಪುಂಡರಿಕಾಕ್ಷ ಬೆಳ್ಳೂರು ನಡೆಸಿಕೊಟ್ಟರು. 


ಯೋಗ ಶಿಬಿರದ ಸಮಾರೋಪ ಸಮಾರಂಭವು ಶಂಖನಾದದೊಂದಿಗೆ ಸಾಮೂಹಿಕ ಓಂಕಾರ ಪ್ರಾರ್ಥನೆ, ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭವಾಯಿತು. ಬಳಿಕ ಶಿಬಿರದ ಯೋಗಭ್ಯಾಸಿಗಳಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.  ಯೋಗ ಪ್ರತಿಭೆ ಕು. ಸನ್ನಿಧಿಯ ವಿಶೇಷ ಯೋಗ ಪ್ರದರ್ಶನ ಜನ ಮೆಚ್ಚುಗೆ ಪಡೆಯಿತು. ಶಿಬಿರಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಶ್ರೀ ರವಿಶಂಕರ್ ನೆಗಳಗುಳಿ ಅತಿಥಿಗಳ ಸ್ವಾಗತ ಪರಿಚಯ ನಡೆಸಿ ಕೊಟ್ಟರು. ಶ್ರೀ ಮಲ್ಲೇಶ್ ಅವರು ಯೋಗದ ಕುರಿತ ಹಾಡು ಹಾಡಿದರು. ಶ್ರೀ ಸದಾಶಿವ ಕಡಂಬಾರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಯೋಗದ ಹಿನ್ನೆಲೆ, ಪ್ರಾಮುಖ್ಯತೆಯ ಕುರಿತು ತಿಳಿಸಿದರು. ಅಧ್ಯಾಪಕ ಶ್ರೀ ಕುಮಾರಸುಬ್ರಮಣ್ಯ ಯೋಗ ಭಾಷಣ ಮಾಡುತ್ತಾ ಯೋಗ ಮಾಡಲು ಪ್ರಶಸ್ತವಾದ ಸಮಯ, ಯೋಗದ ನಿಯಮ ಮುಂತಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಸಪ್ನಾ ಜೆ ಉಕ್ಕಿನಡ್ಕ  ಜೀವನಶೈಲಿ ರೋಗಗಳನ್ನು ಬಾರದಂತೆ ತಡೆಗಟ್ಟುವಲ್ಲಿ ಯೋಗದ ಪಾತ್ರ, ವಿವಿಧ ಆಸನಗಳು ಹಾಗೂ ಪ್ರಾಣಾಯಾಮದ ಮಹತ್ವದ ಬಗ್ಗೆ ಮಾತನಾಡಿದರು . ಶ್ರೀ ರಮೇಶ್ ಮಾವಿನಕಟ್ಟೆ ಧನ್ಯವಾದ ಸಮರ್ಪಿಸಿದರು. ಯೋಗ ಶಿಕ್ಷಕಿ ಶ್ರೀಮತಿ ದಿವ್ಯಾ ಶರ್ಮಾ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಸೀತಾರಾಮ್ ಮುಂಗಿಲ ಶಾಂತಿ ಮಂತ್ರ ಹೇಳಿದರು. ಲಘು ಉಪಹಾರ ಹಾಗೂ ಪಾನೀಯ ವ್ಯವಸ್ಥೆಯೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.

Post a Comment

0 Comments