ಕಾಸರಗೋಡು: ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರುಣ್ ತಾಪ್ಪ(70) ನಿಧನರಾದರು. ಮೇಲ್ಪರಂಬ ನಿವಾಸಿಯಾದ ಅವರು ಅಲ್ಲ ಕಾಲದ ಅಸೌಖ್ಯದಿಂದಿದ್ದು ಕೋಜಿಕ್ಕೋಡ್ ನಲ್ಲಿರುವ ಪುತ್ರಿಯ ಮನೆಯಲ್ಲಿ ಅವರು ಶುಕ್ರವಾರ ಕೊನೆಯುಸಿರೆಳೆದರು. ಕಾಂಗ್ರೆಸ್ ಪಕ್ಷದ ಬ್ಲಾಕ್ ಉಪಾಧ್ಯಕ್ಷ, ಯುಡಿಎಫ್ ಕಾಸರಗೋಡು ಮಂಡಲ ಸಂಚಾಲಕ ಎಂಬೀ ಹುದ್ದೆಗಳನ್ನು ಅಲಂಕರಿಸಿದ್ದರು. ದಿವಂಗತ ಕುಟ್ಟಿಯನ್ ಅವರ ಪುತ್ರನಾದ ಕರುಣ್ ತಾಪ್ಪ, ತಾಯಿ ಚಿರುದ, ಪತ್ನಿ ಸರೋಜಿನಿ, ಮಕ್ಕಳಾದ ಶೀತಲ್ (ನೆತರ್ಲೇಂಡ್), ಶಿಮಿ (ಆಸ್ಟ್ರೇಲಿಯಾ), ಡಾ.ಶ್ವೇತ(ಕೋಜಿಕ್ಕೋಡ್) ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ
0 Comments