Ticker

6/recent/ticker-posts

Ad Code

ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯಲ್ಲಿ ವಾಚನಾ ದಿನಾಚರಣೆ, ವಾಚನಾ ಸಪ್ತಾಹ ಉದ್ಘಾಟನೆ


ಮೀಯಪದವು : ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯಲ್ಲಿ ಕೇರಳದ ಗ್ರಂಥಶಾಲಾ ಪಿತಾಮಹರಾದ ಪಿ ಯನ್ ಪಣಿಕ್ಕರ್ ಇವರ ಚರಮದಿನದ ಅಂಗವಾಗಿ ವಾಚನಾ ದಿನಾಚರಣೆ ಮತ್ತು ವಾಚನಾ ಸಪ್ತಾಹ ಉದ್ಘಾಟನಾ ಸಮಾರಂಭವು ಶ್ರೀ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿತು.


 ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾ ಶ್ರೀ ರಾಮಚಂದ್ರ ಕೆ ಯಂ ಔಪಚಾರಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪಿ ಯನ್ ಪಣಿಕ್ಕರ್ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದರು. ಶಾಲಾ ಅಧ್ಯಾಪಕರಾದ ಶ್ರೀ ಸುಶಾಂತ್‌ ಮಯ್ಯ ವಾಚನ ‌ದಿನಾಚರಣೆಯ ಬಗ್ಗೆ ಮಾತನಾಡಿ ಪಿ‌ ಯನ್ ಪಣಿಕ್ಕರ್ ನಡೆದು ಬಂದ ಹಾದಿಯನ್ನು ಸವಿಸ್ತಾರವಾಗಿ ತಿಳಿಸಿದರು.ಶಾಲಾ ಗ್ರಂಥಾಲಯದ ಸಂಚಾಲಕರಾದ ಶ್ರೀಮತಿ ಪ್ರತಿಭಾ ಟೀಚರ್ ಮಕ್ಕಳಿಗೆ ಪ್ರತಿಜ್ಙೆಯನ್ನು ಬೋಧಿಸಿದರು ಮತ್ತು ವಾಚನಾ ಸಪ್ತಾಹದಂಗವಾಗಿ ನಡೆಯುವ ಸ್ಪರ್ಧೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.ಯು ಪಿ ಶಾಲಾ ಸಂಪನ್ಮೂಲ ತಂಡದ ಸಂಚಾಲಕರಾದ ಶ್ರೀಮತಿ ಶ್ರೀಲಕ್ಷ್ಮಿ  ಮತ್ತು ಎಲ್‌ ಪಿ ಶಾಲಾ ಸಂಪನ್ಮೂಲ ತಂಡದ ಸಂಚಾಲಕರಾದ ಶ್ರೀ ಸುನಿಲ್ ಕುಮಾರ್ ಯಂ ತಮ್ಮ ಉಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಶ್ರೀ ಪಿ‌ ಯನ್ ಪಣಿಕ್ಕರ್ ಕುರಿತಾದ ವೀಡಿಯೋ ಪ್ರದರ್ಶನ ಈ ಸಂದರ್ಭದಲ್ಲಿ ನಡೆಯಿತು.  ಅಧ್ಯಾಪಿಕೆಯಾದ  ಶ್ರೀಮತಿ ಶುಭ ಪಿ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಅಧ್ಯಾಪಕರಾದ ಶ್ರೀ ವಿಘ್ನೇಶ್ ಯಸ್ ಧನ್ಯವಾದವಿತ್ತರು. ಅಧ್ಯಾಪಕರಾದ ಶ್ರೀ ಕೃಷ್ಣ ಶರ್ಮ ಕೆ  ನಿರೂಪಿಸಿದರು.

Post a Comment

0 Comments