Ticker

6/recent/ticker-posts

ಕಾಸರಗೋಡು ಜಿಲ್ಲೆಯ ನಿವಾಸಿಯಾದ ಯುವಕ ಯುರೋಫ್ ನ ಮಾಲ್ಟದಲ್ಲಿ ಕಟ್ಟಡದಿಂದ ಬಿದ್ದು ಮೃತ್ಯು


 ಕಾಸರಗೋಡು:  ಕಾಸರಗೋಡು ಜಿಲ್ಲೆಯ ನಿವಾಸಿಯಾದ ಯುವಕ ಯುರೋಫ್ ನ ಮಾಲ್ಟದಲ್ಲಿ ಕಟ್ಟಡದಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕುತ್ತಿಕೋಲು ಶಂಕರಂಪಾಡಿ ಮಞನಡ್ಕದ ಅಜೇಶ್ ಕುಮಾರ್(40) ಮೃತಪಟ್ಟ ಯುವಕ. ನಿನ್ನೆ (ಶುಕ್ರವಾರ) ಈ ಘಟನೆ ನಡೆದಿದೆ. ಅಜೇಶ್ ಕುಮಾರ್ ಕಳೆದ 4 ವರ್ಷಗಳಿಂದ ಮಾಲ್ಟದಲ್ಲಿ ಕುಟುಂಬ ಸದಸ್ಯರ ಜತೆ ಜೀವನ ನಡೆಸುತ್ತಿದ್ದನು.  ಮೃತರು ತಂದೆ ರಾಮಚಂದ್ರನ್ ನಾಯರ್, ತಾಯಿ ದಾಕ್ಷಾಯಿಣಿ, ಪತ್ನಿ ಪ್ರಿಯ (ಮಾಲ್ಟ), ಪುತ್ರಿ ದೇವಿಕ, ಸಹೋದರರಾದ ವಿಜೇಶ್ (ದುಬೈ), ಜಯೇಶ್ (ಮಾಲ್ಟ) ಎಂಬಿವರನ್ನು ಅಗಲಿದ್ದಾರೆ.

Post a Comment

0 Comments