ಮೀಯಪದವು:ಮಜಿಬೈಲು ನರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2025- 26ನೆ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು ಒಂದನೇ ತರಗತಿಗೆ ದಾಖಲಾದ ಮಕ್ಕಳನ್ನು ಹೂ ಗುಚ್ಛ ನೀಡಿ ಸ್ವಾಗತಿಸಲಾಯಿತು ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ನಿರ್ವಾಹ ಸಮಿತಿ ಅಧ್ಯಕ್ಷೆ ಶ್ರೀಮತಿ ವಿನಯ ರವರು ವಹಿಸಿದ್ದರು ಮಜಿಬೈಲು ವಾರ್ಡು ಸದಸ್ಯರಾದ ಶ್ರೀಮತಿ ಆಶಾಲತ ಬಿ.ಎಂ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಸಭೆಯಲ್ಲಿ ಮಾತೃ ಸಂಘದ ಅಧ್ಯಕ್ಷೆ ಶೋಭಾ ನಿವೃತ್ತ ಏ ಐ ಒ ಶ್ರೀ ಎಂ ಜಿ ನಾರಾಯಣ ರಾವ್ ಜಗದೀಶ ಚೇತನ ನಗರ ರಾಜೇಶ್ ಚೇತನ್ ನಗರ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀ ದಿನೇಶ ಎಂ ಮೊದಲಾರವರು ಉಪಸ್ತಿತರಿದ್ದರು ಶಾಲಾ ಶಿಕ್ಷಕರಾದ ಶ್ರೀ ದೇವಾನಂದರು ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಸುರೇಶ ಬಂಗೇರರವರು ಶಾಲಾ ವ್ಯವಸ್ಥೆಗಳ ಬಗೆ ತಿಳಿಸಿದರು ಈ ಸಂದರ್ಭದಲ್ಲಿ ಶಾಲಾಮಕ್ಕಳಿಗೆ ದಾನಿಗಳ ನೆರವಿನೊಂದಿಗೆ ಬ್ಯಾಗ್ ಹಾಗೂ ಕಲಿಕೋಪಕರಣಗಳನ್ನು ವಿತರಿಸಲಾಯಿತು. ಶಾಲಾ ಶಿಕ್ಷಕಿ ಶ್ರೀಮತಿ ಅಶ್ವಿನಿ ಟೀಚರ್ ಧನ್ಯವಾದವಿತ್ತರು. ಶಾಲಾಮಕ್ಕಳಿಗೆ ಕಲಿಕೋಪಕರಣ ವಿತರಿಸಿದ ಶ್ರೀ ರಾಜೇಶ ಶ್ರೀ ಜಗದೀಶ ಶ್ರೀ ದಯಾನಂದ ಶ್ರೀ ನೌಶಾದ್ ಶ್ರೀ ಬಾಲಕೃಷ್ಣ ಶೆಟ್ಟಿ ಶ್ರೀ ಎಂ ಪಿ ಅಲಿ ಹಾಜಿ ಶ್ರೀ ಕೊರಗಪ್ಪ ಶ್ರೀ ತಮ್ಮಣ್ಣ ಮೇಸ್ತ್ರಿ ಶ್ರೀ ಹರೀಶ್ ನಾಯಕ್ ಶ್ರೀ ದಿನೇಶ ಎಂ ಇವರನ್ನು ಅಭಿನಂದಿಸಲಾಯಿತು
0 Comments