Ticker

6/recent/ticker-posts

ಸ್ವರ್ಗದ ಎಂ.ಕೆ ಬಾಲಕೃಷ್ಣ ಗ್ರಂಥಾಲಯದಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ


 ಸ್ವರ್ಗ : ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಸದಸ್ಯರೂ, ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯರಾದ ರಾಮಚಂದ್ರ ಎಂ ಧ್ವಜಾರೋಹಣಗೈದರು.ಸಭೆಯ ಅಧ್ಯಕ್ಷತೆಯನ್ನು ಗ್ರಂಥಾಲಯದ ಅಧ್ಯಕ್ಷರಾದ ರವಿರಾಜ್ ಎಸ್ ವಹಿಸಿದರು.ಸಭೆಯಲ್ಲಿ ಸಿ.ಡಿ.ಎಸ್ ಉಪಾಧ್ಯಕ್ಷೆ ಶಶಿಕಲಾ ಕೆ, ಮಾತೃಭೂಮಿ ಸ್ವರ್ಗದ ಅಧ್ಯಕ್ಷರಾದ ಮಾಹೇಶ್ ಕೆ,ಕಾರ್ಯದರ್ಶಿ ಗಿರೀಶ್ ಸ್ವರ್ಗ,ಶೇಷಪ್ಪ ಪೂಜಾರಿ,ಆನಂದ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಗ್ರಂಥಾಲಯದ ಕಾರ್ಯದರ್ಶಿ ರವಿ ವಾಣೀನಗರ ಸ್ವಾಗತಿಸಿ ಗ್ರಂಥಪಾಲಕಿ  ಅನಿತಾ ಕೆ ವಂದಿಸಿದರು.

Post a Comment

0 Comments