ಕಾಸರಗೋಡು: ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡ ವ್ಯಕ್ತಿ ನಿಧನರಾದರು. ಮೀಂಜ ಕೋರಿಕ್ಕಾರು ನಿವಾಸಿ, ಗುಮಾಸ್ತರಾಗಿದ್ದ ಮಹಾಬಲ(74) ಮೃತಪಟ್ಟ ವ್ಯಕ್ತಿ. ನಿನ್ನೆ (ಸೋಮವಾರ) ಸಂಜೆ ಈ ಘಟನೆ ನಡೆದಿದೆ. ಬಾಯಾರಿನಿಂದ ಆಟೋ ರಿಕ್ಷಾದಲ್ಲಿ ಮನೆಗೆ ಹೋಗುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಉಪ್ಪಳದ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ.
ಮೃತರು ಪತ್ನಿ ವಸಂತಿ, ಮಕ್ಜಳಾದ ಚರಣ್ ಕುಮಾರ್, ಕೀರ್ತನ, ಲತ, ಅನುಷ, ಸೊಸೆ ಪವಿತ್ರ, ಅಳಿಯಂದಿರಾದ ಶ್ರೀಜಿನ್, ವಿಜಯಕುಮಾರ್, ದಿವಾಕರ, ಸಹೋದರ ಸಹೋದರಿಯರಾದ ಕೃಷ್ಣ ಬಂಗೇರ, ಲಿಂಗಪ್ಪ ಬಂಗೇರ, ರಾಮ ಬಂಗೇರ, ಸುಂದರಿ, ಲಕ್ಷ್ಮಿ, ಗೀತಾ ಎಂಬಿವರನ್ನು ಅಗಲಿದ್ದಾರೆ
0 Comments