ಮಂಜೇಶ್ವರ : ಕಳೆದ ಬುಧವಾರ ರಾತ್ರಿ ಮನೆಯಲ್ಲಿ ಉಂಡು ಮಲಗಿದ್ದ ವ್ಯಕ್ತಿ ಬೆಳಿಗ್ಗೆ ನಾಪತ್ತೆಯಾಗಿದ್ದು ಹುಡುಕಾಟ ನಡೆಯುತ್ತಿರುವ ನಡುವೆ ಆವರಣವಿಲ್ಲದ ಬಾವಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ವರ್ಕಾಡಿ ಬಟ್ಟಿಯಡ್ಕ ನಿವಾಸಿ ಬಿ. ಗಣೇಶ (35)ಎಂಬವರ ಮೃತದೇಹ ಇದೆಂದು ಗುರುತಿಸಲಾಗಿದೆ. ಇವರು ಕಾಂಕ್ರೀಟ್ ಕಾರ್ಮಿಕರಾಗಿದ್ದು ಬೆಳಗ್ಗೆ ಕೆಲಸಕ್ಕೆ ಬೇಗನೇ ತೆರಳಿರಬಹುದೆಂದು ಭಾವಿಸಿದ್ದು ರಾತ್ರಿ ಕಳೆದರೂ ಮನೆಗೆ ಬಾರದೇ ಇದ್ದ ಹಿನ್ನೆಲೆಯಲ್ಲಿ ಹುಡುಕಾಟ ಆರಂಭಿಸಲಾಯಿತು. ಶುಕ್ರವಾರ ನೆರೆಮನೆಯ ಆವರಣರಹಿತ ಬಾವಿಯೊಂದರ ಬಳಿ ಇವರ ಚಪ್ಪಲಿ ಪತ್ತೆಯಾಯಿತು. ಹುಡುಕಿದಾಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಮೃತರು ಆವಿವಾಹಿತರಾಗಿದ್ದು, ಪೂವಪ್ಪ ಬೆಳ್ಚಡ, ವೇದಾವತಿ ದಂಪತಿಯರ ಪುತ್ರನಾಗಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಮಂಜೇಶ್ವರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

0 Comments