ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಷಷ್ಠಿ ಮಹೋತ್ಸವ ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಷಷ್ಠಿ ಮಹೋತ್ಸವದಂಗವಾಗಿ ಕ್ಷೇತ್ರದಲ್ಲಿ ವಿಶೇಷ ತುಲಾಭಾರ ಸೇವೆ, ಮಡೆಸ್ನಾನ, ಸಂಜೆ ಬೀದಿ ಮಡೆಸ್ನಾನ, ಶ್ರೀದೇವರ ಭೂತಬಲಿ, ರಥೋತ್ಸವ, ಭಂಡಾರದ ಮನೆ ವನಕ್ಕೆ ಶ್ರೀ ದೇವರ ಸವಾರಿ ಹಿಂತಿರುಗಿ ಬಂದು ಬೆಡಿ ಉತ್ಸವ, ಶಯನ ಜರಗಿತು. ಗುರುವಾರ ಬೆಳಗ್ಗೆ ಶಯನೋತ್ಥಾನ, ಮಂಗಲಾಭಿಷೇಕ, ಉಷಃಪೂಜೆ, ಗ್ರಾಮಸ್ಥರಿಂದ ಹಣ್ಣು ಕಾಯಿ ಸಮರ್ಪಣೆ ಅವಭೃತ ಸ್ನಾನ ಜರಗಿತು. ನಾಡಿನ ನಾನಾ ಕಡೆಯ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಕೃತಾರ್ಥರಾದರು.
ಚಿತ್ರ : ಶ್ಯಾಮ್ ಪ್ರಸಾದ್ ಕುಂಚಿನಡ್ಕ

0 Comments