ಕಾಸರಗೋಡು : ಪಯ್ಯನ್ನೂರು ಕೆಎಸ್‌ಟಿಪಿ ರಸ್ತೆಯಲ್ಲಿ ಬೈಕ್ ಪಲ್ಟಿಯಾಗಿ ಯುವಕನೋರ್ವ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ. ಕೀಚೇರಿ ಪೆಟ್ರೋಲ್ ಪಂಪ್ ಬಳಿ ವಾಸವಿದ್ದ ಕೆ.ವಿ.ಅಖಿಲ್ (26) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ 11 ಗಂಟೆಗೆ ಕನ್ನಪುರಂ ಸೇತುವೆ ಬಳಿ ಅಪಘಾತ ಸಂಭವಿಸಿದೆ. ಕಣ್ಣೂರಿನಿಂದ ಚೆರುಕುನ್‌ಗೆ ತೆರಳುತ್ತಿದ್ದಾಗ ಅಖಿಲ್ ಅವರ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಡಿಕ್ಕಿ ಹೊಡೆದಿದೆ. ಎರ್ನಾಕುಲಂನಲ್ಲಿ ಆಟೋಮೊಬೈಲ್ ವರ್ಕ್ ಶಾಪ್ ನಡೆಸುತ್ತಿರುವ ಅಖಿಲ್ ಅಲ್ಪ ಸಮಯ ಊರಿಗೆ ಬಂದಿದ್ದರು. ಮೃತದೇಹ ಪಾಪಿನಿಸ್ಸೆರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಪಂಚನಾಮೆ ನಡೆಸಿದ ಬಳಿಕ ಮನೆಯವರಿಗೆ ಬಿಟ್ಟು ಕೊಡಲಾಗುವುದು.

0 Comments