ಕಲಬುರಗಿ: ಜೇವರ್ಗಿ ತಾಲೂಕಿನ ಗೌನಳ್ಳಿ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (51) ಅವರು ಮೃತಪಟ್ಟಿದ್ದಾರೆ.ವಿಜಯಪುರ ಜಿಲ್ಲೆಯಿಂದ ಕಲಬುರಗಿಯತ್ತ ಕಾರಿನಲ್ಲಿ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮಹಾಂತೇಶ್ ಸೇರಿದಂತೆ ಕಾರಿನಲ್ಲಿದ್ದ ಅವರ ಸಹೋದರ ಶಂಕರ್ ಬೀಳಗಿ, ಚಾಲಕನು ಸಹ ಸ್ಥಳದಲ್ಲಿ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮಹಾಂತೇಶ್ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಮೊದಲು ದಾವಣಗೆರೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನಮನ್ನಣೆಯನ್ನು ಪಡೆದಿದ್ದ ಅವರು, ಪ್ರಸ್ತುತ ಬೆಸ್ಕಾಂನ ಎಂಡಿಯಾಗಿದ್ದರು. ಚಾಲಕನ ನಿಯಂತ್ರಣ ತಪ್ಪಿ ಇನ್ನೊವಾ ಕಾರು ಪಲ್ಟಿಯಾದ ಪರಿಣಾಮ ಈ ಘೋರ ಅನಾಹುತ ಸಂಭವಿಸಿದೆ. ಮಣ್ಣೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬೀಳಗಿ ಅವರು ಅಸುನೀಗಿದ್ದಾರೆ.
ಇನ್ನು ಸುದ್ದಿ ತಿಳಿದ ಕೂಡಲೇ ಆಸ್ಪತ್ರೆಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಸೇರಿ ಇತರ ಅಧಿಕಾರಿಗಳು ದೌಡಾಯಿಸಿದ್ದಾರೆ.
2012ರ ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿಯಾಗಿದ್ದ ಮಹಾಂತೇಶ್ ಅವರು ಮೂಲತಃ ರಾಮದುರ್ಗದವರು. ದಾವಣಗೆರೆಯ ಡಿಸಿಯಾಗುವ ಮುನ್ನ ಧಾರವಾಡದ ಎಸಿಯಾಗಿದ್ದರು. ಇದಕ್ಕೂ ಮೊದಲು ಅವರು ಧಾರವಾಡದಲ್ಲಿ ಇಂಗ್ಲಿಷ್ ಟ್ಯೂಷನ್ ಹೇಳುತ್ತಿದ್ದರು. ದಾವಣಗೆರೆಯ ಡಿಸಿಯಾದ ನಂತರ ಅವರು ಬೆಂಸ್ಕಾಂನ ಎಂಡಿ (ವ್ಯವಸ್ಥಾಪಕ ನಿರ್ದೇಶಕ) ಯಾಗಿ ನೇಮಕವಾಗಿದ್ದರು.

0 Comments