ಮಂಜೇಶ್ವರ : ಸುಮಾರು 635 ಶಾಖೆ ಹೊಂದಿರುವ ಕೇರಳ ಗ್ರಾಮೀಣ ಬ್ಯಾಂಕಿನಲ್ಲಿ ಅರುವತ್ತು ಸಾವಿರ ಕೋಟಿ ಗ್ರಾಹಕರ ಠೇವಣಿ ತುಂಬಿದ ಈ ಸಂದರ್ಭದಲ್ಲಿ ಬ್ಯಾಂಕಿನ ಪಾವೂರು ಶಾಖೆಯಲ್ಲಿ ಗ್ರಾಹಕರು, ಕೃಷಿಕರು, ಬ್ಯಾಂಕ್ ಸಿಬ್ಬಂದಿಗಳು ಸೇರಿ ಕೇಕ್ ಕತ್ತರಿಸುವ ಮೂಲಕ ಸಂತೋಷ ಕೂಟ ಆಚರಣೆ ಮಾಡಿದರು. ಪಾವೂರು ಶಾಖೆಯ ಮೆನೇಜರ್ ಶ್ರುತಿ ಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ಉದ್ಘಾಟಿಸಿದರು. ತ್ಯಾoಪಣ್ಣ ರೈ ಮುಟ್ಲ, ಸುಧಾಕರ ಕೊಂಬಗುರಿ, ಪೋಸ್ಟ್ ಮಾಸ್ಟರ್ ಪ್ರಕಾಶ್ ಕಾಪು, ಬ್ಯಾಂಕ್ ಸಿಬ್ಬಂದಿಗಳಾದ ರಿಜಿನ್, ಶಾನೇಶ್, ವೀಣಾ, ಯೋಗೇಶ್ ಆಚಾರಿ, ಹಾಗೂ ಕೃಷಿಕರು, ಗ್ರಾಹಕರು ಉಪಸ್ಥಿತರಿದ್ದರು. ರಿಜಿನ್ ಸ್ವಾಗತಿಸಿ, ವೀಣಾ ವಂದಿಸಿದರು.

0 Comments