ಕಾಸರಗೋಡು : ಆಲ್ ಕೇರಳ ಪೋಟೊಗ್ರಾಫರ್ಸ್ ಅಸೋಸಿಯೇಷನ್ 41ನೇ ಕಾಸರಗೋಡು ಜಿಲ್ಲಾ ಸಮ್ಮೇಳನವು ಕಾಞಂಗಾಡ್ ವ್ಯಾಪಾರ ಭವನದಲ್ಲಿ ಅದ್ಧೂರಿಯಾಗಿ ಆರಂಭವಾಯಿತು. ಖ್ಯಾತ ಚಿತ್ರಕಥೆಗಾರ ಮತ್ತು ಬರಹಗಾರ ಪಿ.ವಿ. ಶಾಜಿಕುಮಾರ್ ಸಮ್ಮೇಳನವನ್ನು ಉದ್ಘಾಟಿಸಿದರು. ರಾಜ್ಯಾಧ್ಯಕ್ಷ ಎ.ಸಿ. ಜಾನ್ಸನ್ ವ್ಯಾಪಾರ ಮೇಳವನ್ನು ಉದ್ಘಾಟಿಸಿದರು. ಜಿಲ್ಲಾ ಅಸೋಸಿಯೇಷನ್ ಹಾಗೂ ವಿವಿಧ ವಲಯ ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉದ್ಘಾಟನೆಗಿಂತ ಮುಂಚಿತವಾಗಿ ಬೃಹತ್ ಮೆರವಣಿಗೆ ನಡೆಯಿತು.

0 Comments