ಕಾಸರಗೋಡು : ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ಎಕೆಪಿಎ) ಕಾಸರಗೋಡು ಪೂರ್ವ ಯೂನಿಟ್ ವತಿಯಿಂದ ಕೂಡ್ಲು ನಿವಾಸಿ ಬಡಕುಟುಂಬದ ಕಮಲ ಎಂಬವರಿಗೆ ಮಧುಮೇಹ ತಪಾಸಣಾ ಕಿಟ್ ನ್ನು ಮಧೂರು ಪಂಚಾಯತ್ ಕೂಡ್ಲು 17ನೇ ವಾರ್ಡ್ ಕೌನ್ಸಿಲರೂ ಮಧೂರು ಪಂಚಾಯತ್ ಉಪಾಧ್ಯಕ್ಷರೂ ಆದ ಶ್ರೀ ಭಾನುಪ್ರಕಾಶ್ ಅವರು ನೀಡಿದರು. ಬಳಿಕ ಮಾತನಾಡಿದ ಅವರು ಎಕೆಪಿಎ ಸಂಘಟನೆಯಿಂದ ಈ ರೀತಿಯ ಸಮಾಜ ಸೇವೆ ಮಾಡುತ್ತಿರುವುದನ್ನು ಪ್ರಶಂಸನೆಗೈದರು. ಈ ವಾರ್ಡಿನಿಂದ ಆಯ್ಕೆಯಾದ ತಾನು ತನ್ನ 5 ವರ್ಷದ ಸಂಬಳವನ್ನು ವಾರ್ಡಿನ ಜನರ ಸೇವೆಗೆ ಉಪಯೋಗಿಸುವುದಾಗಿ ಅಲ್ಲದೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಎಕೆಪಿಎ ವೆಸ್ಟ್ ಯೂನಿಟ್ ಅಧ್ಯಕ್ಷ ವಸಂತ ಕೆರಮನೆ, ಜಿಲ್ಲಾ ಸಮಿತಿ ಸದಸ್ಯ ಹಿರಿಯ ಛಾಯಾಗ್ರಾಹಕ ಮೈಂದಪ್ಪ, ವಲಯ ಸಮಿತಿ ಉಪಾಧ್ಯಕ್ಷ ಸುಬ್ರಹ್ಮಣ್ಯ ವಿಡಿಯೋನಿಕ್ಸ್, ಯೂನಿಟ್ ನಿರೀಕ್ಷಕ ಅಜಿತ್ ಸಿಗ್ನೇಚರ್, ಹಿರಿಯ ಛಾಯಾಗ್ರಾಹಕ ಮುರಳಿ ಎಲ್ಲೋರ ಮೊದಲಾದವರು ಉಪಸ್ಥಿತರಿದ್ದರು. ಯೂನಿಟ್ ಕಾರ್ಯದರ್ಶಿ ಶಾಲಿನಿ ರಾಜೇಂದ್ರನ್ ಸ್ವಾಗತಿಸಿ, ವಲಯ ಜತೆ ಕಾರ್ಯದರ್ಶಿ ಗಣೇಶ್ ರೈ ವಂದಿಸಿದರು.

0 Comments