Ticker

6/recent/ticker-posts

Ad Code

ಮಾತೃಭೂಮಿ ಸ್ವರ್ಗ ಮತ್ತು‌ ಎಂ.ಕೆ ಬಾಲಕೃಷ್ಣ ಗ್ರಂಥಾಲಯದ ನೇತೃತ್ವದಲ್ಲಿ ರಸ್ತೆ ಶ್ರಮದಾನದ ಮಾದರಿ ಕಾರ್ಯ

ಪೆರ್ಲ: ಸ್ವರ್ಗ ರಸ್ತೆಯ ಗೋಳಿಕಟ್ಟೆಯಿಂದ ಸ್ವರ್ಗ-ಸೂರಂಬೈಲು ರಸ್ತೆ ಟಾರಿಂಗ್ ರಸ್ತೆಯಾದರೂ ಇಕ್ಕೆಲಗಳಲ್ಲಿ ಮಳೆಗಾಲದಲ್ಲಿ ಉಂಟಾದ ಮಣ್ಣು ಸವೆತದಿಂದಾಗಿ ಟಾರ್ ನ ಅಂಚು ಜರಿದು ಸಂಚಾರಕ್ಕೆ ಅಸಾಧ್ಯವಾಗಿತ್ತು. ಎದಿರು ಬದಿರು ಎರಡು ವಾಹನ ಸಂಚಾರಕ್ಕೆ ಕಷ್ಟಕರವಾಗಿತ್ತು.ಈ ರಸ್ತೆಯ ಗೋಳಿಕಟ್ಟೆಯಿಂದ ಕೆಳಗೆ ರಸ್ತೆಯ ಎರಡೂ ಬದಿಗಳಲ್ಲಿ ಶ್ರಮದಾನದ ಮೂಲಕ ಮಣ್ಣು ತುಂಬಿಸಿ ವಾಹನ ಸಂಚಾರಕ್ಕೆ‌ ಯೋಗ್ಯವನ್ನಾಗಿ ಮಾಡಿಸಲಾಯಿತು. ಮಾತೃಭೂಮಿ ಸ್ವರ್ಗ ಮತ್ತು‌ ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯದ ನೇತೃತ್ವದಲ್ಲಿ ನಡೆದ ಶ್ರಮದಾನಕ್ಕೆ ಎಣ್ಮಕಜೆ‌ ಗ್ರಾಮ ಪಂಚಾಯತು ಸದಸ್ಯ ರಾಮಚಂದ್ರ ಎಂ, ಮಾತೃಭೂಮಿ ಸ್ವರ್ಗದ ಅಧ್ಯಕ್ಷ ಮಹೇಶ್ ಕೆ, ಕಾರ್ಯದರ್ಶಿ ಗಿರೀಶ್ ಸ್ವರ್ಗ, ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯದ ಅಧ್ಯಕ್ಷ ರವಿರಾಜ್ ಎಸ್, ಕಾರ್ಯದರ್ಶಿ ರವಿ ವಾಣೀನಗರ, ಮೊದಲಾದವರು ನೇತೃತ್ವ ನೀಡಿದರು.

ಶ್ರಮದಾನದಲ್ಲಿ ಮಾತೃಭೂಮಿ, ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯ ಸದಸ್ಯರು, ಊರವರು ಭಾಗವಹಿಸಿದರು.

Post a Comment

0 Comments