Ticker

6/recent/ticker-posts

Ad Code

ಶ್ರೀಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ ಕುಕ್ಕಂಕೋಡ್ಲು ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

 

ಮಾನ್ಯ : ಶ್ರೀಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ ಕುಕ್ಕಂಕೋಡ್ಲು ಇಲ್ಲಿ ಕಿರುಷಷ್ಠಿ  ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ  ರಂಗಪೂಜೆ, ಅತ್ತಾಳ ಪೂಜೆ, ಪ್ರಸಾದ ಭೋಜನ ನಡೆಯಿತು. ಊರ ಬಾಲ ಕಲಾವಿದರಿಂದ ನೃತ್ಯ ವೈವಿಧ್ಯ ನಂತರ ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ಸಂಘ ಕಲ್ಲಕಟ್ಟ ಇವರ ತಂಡದಿಂದ ಕುಣಿತ ಭಜನೆ ನಡೆಯಿತು. ಮರುದಿನ  ಗಣಪತಿ ಹವನ, ನವಕ ಅಭಿಷೇಕ,  ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು. ಡಾ.ವಾಣಿಶ್ರೀ ಕಾಸರಗೋಡು ಇವರ ನೇತೃತ್ವದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾ0ಸ್ಕೃತಿಕ  ವೇದಿಕೆ ಕಾಸರಗೋಡು  ಇವರಿಂದ ಸಾಹಿತ್ಯ ಗಾನ ವೈಭವ ಮತ್ತು ಸ್ಕಂದ ಯಕ್ಷ ಕಲಾ ಸಂಘ ಕಾರಡ್ಕ ಇವರಿಂದ ಯಕ್ಷಗಾನ ತಾಳ ಮದ್ದಳೆ ನಡೆಯಿತು ನಂತರ  ರಕ್ತೇಶ್ವರಿ ತಂಬಿಲ, ತಾಯಂಬಕ, ಸುಬ್ರಮಣ್ಯ ಸ್ವಾಮಿಯ ಮಹಾಪೂಜೆ, ಶ್ರೀ ಭೂತಬಲಿ ಉತ್ಸವ, ಬೆಡಿಸೇವೆ, ಬಟ್ಟಲು ಕಾಣಿಕೆ, ರಾಜಾಂಗಂಣ ಪ್ರಸಾದ, ಮಂತಾಕ್ಷತೆ ನಡೆಯಿತು ಏಣಿಯಡ್ಪು ಕೋದಂಬರತ್ ತರವಾಡಿನಿಂದ ಭಂಡಾರ ಬಂದು ತೊಡ0ಗಲ್, ವಿಷ್ಣು ಮೂರ್ತಿ ದೈವದ  ಕೋಲ ಮತ್ತು ಪ್ರಸಾದ ವಿತರಣೆ ನಂತರ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಂತರ ಭಂಡಾರ ತರವಾಡಿಗೆ ನಿರ್ಗಮಿಸುವುದರೊ0ದಿಗೆ ಜಾತ್ರಾ ಮಹೋತ್ಸವ ಸಂಪನ್ನವಾಯಿತು.

Post a Comment

0 Comments