ಹೊಸಂಗಡಿ : ಸಿಐಟಿಯು ಮಂಜೇಶ್ವರ ಏರಿಯಾ ಸಮಾವೇಶ ಹೊಸಂಗಡಿ ಕೆಎಸ್ ಟಿಎ ಭವನದಲ್ಲಿ ನಡೆಯಿತು. ಸಿಐಟಿಯು ಕಾಸರಗೋಡು ಜಿಲ್ಲಾ ಕೋಶಾಧಿಕಾರಿ ತಂಬಾನ್ ನಾಯರ್ ಉದ್ಘಾಟಿಸಿದರು. ಸಿಐಟಿಯು ಮಂಜೇಶ್ವರ ಏರಿಯಾ ಅಧ್ಯಕ್ಷ ಡಿ ಕಮಲಾಕ್ಷ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಶೋಭಾ ಬಿ, ಜಿಲ್ಲಾ ಉಪಾಧ್ಯಕ್ಷೆ ಬೇಬಿ ಶೆಟ್ಟಿ, ಏರಿಯಾ ಖಜಾಂಜಿ ಸತೀಶ್ ಎಲಿಯಾನಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಶಾಂತ್ ಕನಿಲ ವರದಿ ಮಂಡಿಸಿದರು. ಚರ್ಚೆ ಹಾಗೂ ಚರ್ಚೆಗೆ ಉತ್ತರ ನೀಡಿದ ಬಳಿಕ ನೂತನ ಅಧ್ಯಕ್ಷರಾಗಿ ಡಿ. ಕಮಲಾಕ್ಷ, ಕಾರ್ಯದರ್ಶಿಯಾಗಿ ಸತೀಶ ಎಲಿಯಾನಾ, ಖಜಾಂಜಿ ಸರೋಜಾ, ಚಂದ್ರನಾಯ್ಕ, ನವೀನ್ ಕುಮಾರ್ ಟಿ ಉಪಾಧ್ಯಕ್ಷರು, ಮಾಲತಿ ಉಮೇಶ್ ಅಟ್ಟೆಗೊಳಿ, ಉದಯ ಮುನ್ನೂರು ಜೊತೆ ಕಾರ್ಯದರ್ಶಿಗಳಾಗಿ ಒಟ್ಟು 25 ಜನರ ಏರಿಯಾ ಸಮಿತಿಯನ್ನು ಆಯ್ಕೆ ಮಾಡಲಾಯಿತು.

0 Comments