Ticker

6/recent/ticker-posts

Ad Code

ಕಾಸರಗೋಡು ಜಿಲ್ಲೆಯ ಎಂಟು ಶಿಕ್ಷಣ ಸಂಸ್ಥೆಗಳಿಗೆ ಇಂದು ರಜೆ

 

ಸ್ಥಳೀಯಾಡಳಿತ  ಚುನಾವಣೆಯ ಅಂಗವಾಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ. ಕಾಸರಗೋಡು ಜಿಲ್ಲೆಯ ಎಂಟು ಶಿಕ್ಷಣ ಸಂಸ್ಥೆಗಳಿಗೆ ಇಂದು ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಮತಯಂತ್ರ ಸೇರಿದಂತೆ ಚುನಾವಣಾ ಸಲಕರಣೆಗಳ ಸ್ವಾಗತ ಮತ್ತು ವಿತರಣಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುವ ಸ್ಟ್ರಾಂಗ್ ರೂಂ ಹೊಂದಿರುವ ಶಿಕ್ಷಣ ಸಂಸ್ಥೆಗಳಿಗೆ ಇಂದು ರಜೆ ಸಾರಲಾಗಿದೆ. ಮಂಜೇಶ್ವರ ಬ್ಲಾಕ್‌ನಲ್ಲಿ ಜಿಎಚ್‌ಎಸ್‌ಎಸ್ ಕುಂಬಳೆ, ಕಾಸರಗೋಡು ಬ್ಲಾಕ್‌ನ ಕಾಸರಗೋಡು ಸರ್ಕಾರಿ ಕಾಲೇಜು, ಕಾರಡ್ಕ ಬ್ಲಾಕ್‌ನಲ್ಲಿ ಬಿಆರ್‌ಎಚ್‌ಎಸ್‌ಎಸ್ ಬೋವಿಕಾನ, ಕಾಞಂಗಾಡ್ ಬ್ಲಾಕ್‌ನ ದುರ್ಗಾ ಎಚ್‌ಎಸ್‌ಎಸ್, ನೀಲೇಶ್ವರ ಪುರಸಭೆಯಲ್ಲಿ ರಾಜಾಸ್ ಎಚ್‌ಎಸ್‌ಎಸ್, ಪರಪ್ಪ, ಬ್ಲಾಕ್‌ನಲ್ಲಿ ಜಿಎಚ್‌ಎಸ್‌ಎಸ್ ಪರಪ್ಪ, ನೆಹರು ಕಾಲೇಜು ಪಡನ್ನಕ್ಕಾಡ್, ಕಾಞಂಗಾಡ್  ಮುನ್ಸಿಪಾಲಿಟಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಹೊಸದುರ್ಗ ವ್ಯಾಪ್ತಿಯ ಶಾಲೆಗಳಿಗೆ ಇಂದು ರಜೆ ಘೋಷಿಸಿದೆ. ಉಳಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಇಂದು ಎಂದಿನಂತೆ ಕಾರ್ಯಾಚರಿಸುತ್ತವೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments