ಕಾಸರಗೋಡು : ಸ್ಥಳೀಯಾಡಳಿತ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯನ್ನು ನಾಳೆ (ಡಿ.13) ವಿವಿಧ ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ. ಪಂಚಾಯತ್‌ಗಳ ಮತಗಳನ್ನು ಬ್ಲೋಕ್ ಮಟ್ಟದ ಕೇಂದ್ರಗಳಲ್ಲಿ ಮತ್ತು ನಗರಸಭೆ ಮಟ್ಟದಲ್ಲಿ ಆಯಾ ಸಂಸ್ಥೆಗಳಲ್ಲಿ ಎಣಿಕೆ ಮಾಡಲಾಗುತ್ತದೆ. ಜಿಲ್ಲಾ ಪಂಚಾಯತ್‌ಗಳ ಅಂಚೆ ಮತಪತ್ರಗಳ ಎಣಿಕೆಯನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಿವಿಲ್ ಸ್ಟೇಶನ್ ನಲ್ಲಿ ನಡೆಸಲಾಗುತ್ತದೆ. ಫಲಿತಾಂಶಗಳನ್ನು ತಿಳಿದುಕೊಳ್ಳಲು ಮಾಧ್ಯಮ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ 2025ರ ಫಲಿತಾಂಶಗಳನ್ನು ಪತ್ರಕರ್ತರಿಗೆ ಕ್ಲಪ್ತ ಸಮಯದಲ್ಲಿ ಲಭ್ಯವಾಗುವಂತೆ ಮಾಡಲು, ಜಿಲ್ಲಾ ಚುನಾವಣಾ ಆಯೋಗ ಮತ್ತು ಕಲೆಕ್ಟರೇಟ್‌ನಲ್ಲಿರುವ ಮಾಹಿತಿ ಪ್ರಕಟಣೆ ಇಲಾಖೆಯ ಜಿಲ್ಲಾ ಮಾಹಿತಿ ಕಚೇರಿಯ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮತ ಎಣಿಕೆಯ ಪ್ರಗತಿ, ಗೆಲುವಿನ ಫಲಿತಾಂಶಗಳು ಇತ್ಯಾದಿಗಳ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆಕ್ಲಪ್ತ ಸಮಯದಲ್ಲಿ ತಿಳಿಯಲು ವ್ಯವಸ್ಥೆಯನ್ನು ಮಾಡಲಾಗಿದೆ. ಚುನಾವಣಾ ಫಲಿತಾಂಶಗಳನ್ನು ಕ್ಲಪ್ತ ಸಮಯದಲ್ಲಿ ಒದಗಿಸಲು NIC ಟ್ರೆಂಡ್ ವ್ಯವಸ್ಥೆಯನ್ನು ಬಳಸಲಾಗುತ್ತದೆ.

0 Comments