ಪತ್ತನಂತಿಟ್ಟ : ಶಬರಿಮಲೆ ಸನ್ನಿಧಾನದಲ್ಲಿ ಡಿ.26 ಮತ್ತು 27ರಂದು ನಡೆಯಲಿರುವ ಮಂಡಲ ಪೂಜೆಗೆ ಬುಕ್ಕಿಂಗ್ ಆರಂಭವಾಗಿದೆ. ಮಂಡಲ ಪೂಜೆಯ ದರ್ಶನಕ್ಕಾಗಿ sabarimala-online.org ವೆಬ್‌ಸೈಟ್ ಮೂಲಕ ಬುಕ್ ಮಾಡಬಹುದು. ಆನ್‌ಲೈನ್ ಬುಕ್ಕಿಂಗ್ ಮೂಲಕ ಡಿ. 26ರಂದು 30 ಸಾವಿರ ಮತ್ತು ಡಿ. 27ರಂದು 35 ಸಾವಿರ ಭಕ್ತರಿಗೆ ದರ್ಶನ ಪಡೆಯಲು ಅವಕಾಶವಿದೆ. ಮಂಡಲ-ಮಕರಜ್ಯೋತಿ ಮಹೋತ್ಸವಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದಂತೆ ಆನ್‌ಲೈನ್ ಮತ್ತು ಸ್ಪಾಟ್ ಬುಕ್ಕಿಂಗ್ ನಿರ್ಬಂಧ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಶಬರಿಮಲೆ ಎಡಿಎಂ ಡಾ. ಅರುಣ್ ಎಸ್. ನಾಯರ್ ಹೇಳಿದ್ದಾರೆ. ಪ್ರಸ್ತುತ, ಶಬರಿಮಲೆಯಲ್ಲಿ ದಟ್ಟಣೆ ನಿಯಂತ್ರಣದಲ್ಲಿದೆ. ಭಕ್ತರಿಗೆ ಸುರಕ್ಷಿತ ಮತ್ತು ಸುಗಮ ದರ್ಶನ ಪಡೆಯಲು ಸಾಧ್ಯವಾಗುತ್ತಿದೆ. ಸನ್ನಿಧಾನದ ದೇವಸ್ವಂ ಸಭಾಂಗಣದಲ್ಲಿ ನಡೆದ ನಾಲ್ಕನೇ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಮಂಡಲ ಪೂಜೆ ಹಾಗೂ ಮಕರಜ್ಯೋತಿ ಸಂದರ್ಭದಲ್ಲಿ ದಟ್ಟಣೆ ನಿಯಂತ್ರಿಸುವ ವ್ಯವಸ್ಥೆಗಳು ಮತ್ತು ನಾನಾ ಇಲಾಖೆ ಗಳನ್ನು ಸಂಯೋಜಿಸುವ ಮೂಲಕ ಕೈಗೊಳ್ಳಬೇಕಾದ ಚಟುವಟಿಕೆಗಳ ಬಗ್ಗೆ ನಿರ್ದೇಶನ ನೀಡಲಾಗಿದೆ..

0 Comments