ಕಾಸರಗೋಡು: ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಅತ್ಯಧಿಕ ಮತದಾನ ದಾಖಲಿಸಿದೆ. ಇದುವರೆಗಿನ ಅಂಕಿ ಅಂಶದಂತೆ ಶೇ. 63.87 ಜನರು ಮತ ಚಲಾಯಿಸಿದರು. ಪ್ರಾರಂಭದಲ್ಲಿ ಮತದಾನಕ್ಕೆ ಜನ ಸಂಖ್ಯೆ ನಿಧಾನವಾಗಿದ್ದರೂ, ಮಧ್ಯಾಹ್ನದ ವೇಳೆಗೆ ವಾತಾವರಣವೇ ಬದಲಾಗತೊಡಗಿತು.
ಹೆಚ್ಚಿನ ಬೂತ್‌ಗಳ ಮುಂದೆ ದೀರ್ಘ ಸರತಿ ಸಾಲುಗಳು ರೂಪುಗೊಂಡವು. ಪ್ರಸ್ತುತ ಪರಿಸ್ಥಿತಿ ಮುಂದುವರಿದರೆ, ಹೆಚ್ಚಿನ ಬೂತ್‌ಗಳಲ್ಲಿ ನಿಗದಿತ ಸಮಯದ ಮಿತಿಯೊಳಗೆ ಮತದಾನ ಪೂರ್ಣಗೊಳ್ಳುವುದು ಕಷ್ಟ ಎಂದು ವರದಿಯಾಗುತ್ತಿದೆ. ಗ್ರಾಮೀಣ ಪ್ರದೇಶಗಳ ಪಂಚಾಯತುಗಳಾದ ಎಣ್ಮಕಜೆ, ಬೆಳ್ಳೂರು, ಕುಂಬ್ಡಾಜೆ, ಕಾರಡ್ಕ ಪ್ರದೇಶಗಳಲ್ಲಿ ಮತದಾರರ ಸರತಿ ಸಾಲು ಕಂಡು ಬಂದಿದೆ. ಕಾಸರಗೋಡು ಪುರಸಭೆಯಲ್ಲಿ ಶೇ. 50.31 ರಷ್ಟು ಮತದಾನವಾಗಿದೆ.
ಚಿತ್ರಗಳು : ಶ್ರೀಕಾಂತ್ ಕಾಸರಗೋಡು




0 Comments