ಕಾಸರಗೋಡು : ಕಾಞಂಗಾಡ್‌ನ ಮತಗಟ್ಟೆಯೊಂದರಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಸಂಸದ ರಾಜಮೋಹನ್ ಉನ್ನಿತಾನ್ ರಾಜಕೀಯ ಭಾಷಣ ಮಾಡಿದ್ದಾರೆ. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ದೂರಲಾಗಿದೆ. ಕಾಞಂಗಾಡ್ ಪುರಸಭೆಯ ವಾರ್ಡ್ 29ರಲ್ಲಿರುವ ಕಾಞಂಗಾಡ್ ದಕ್ಷಿಣ ಸರ್ಕಾರಿ ವೃತ್ತಿಪರ ಪ್ರೌಢಶಾಲೆಯಲ್ಲಿ ತಮ್ಮ ಮತವನ್ನು ನೋಂದಾಯಿಸಿದ ನಂತರ ಸಂಸದರು ಮಾಧ್ಯಮ ಪ್ರತಿನಿಧಿಗಳ ಮುಂದೆ ಅಭಿಪ್ರಾಯ ಸೂಚಿಸುವುದರ ಜತೆಗೆ ರಾಜಕೀಯ ಭಾಷಣ ಮಾಡಿದ್ದಾರೆ ಎಂಬ ಆರೋಪವಿದೆ. ಇದನ್ನು ಗಮನಿಸಿದ ಎಲ್‌ಡಿಎಫ್ ಕಾರ್ಯಕರ್ತರು ತಗಾದೆ ಎಬ್ಬಿಸಿದರು. ಎಲ್‌ಡಿಎಫ್ ವಾರ್ಡ್ 29ರ ಮುಖ್ಯ ಏಜೆಂಟ್ ಪಿ ಸುಶಾಂತ್ ಅವರು ಚುನಾವಣಾ ಅಧಿಕಾರಿಗೆ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಸಂಸದರ ವಿರುದ್ಧ ದೂರು ದಾಖಲಿಸಿದ್ದಾರೆ.

0 Comments