Ticker

6/recent/ticker-posts

Ad Code

18 ದಿನಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಶಬರಿಮಲೆ ಭೇಟಿ


 ಶಬರಿಮಲೆ: ಮಂಡಲ-ಮಕರಜ್ಯೋತಿ ಋತುವಿನ ಮೊದಲ 18 ದಿನಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದಾರೆ. ಕಳೆದೆರೆಡು ದಿನಗಳಲ್ಲಿ 1.6ಸಾವಿರಕ್ಕೂ ಹೆಚ್ಚು ಭಕ್ತರು ಸನ್ನಿಧಾನ ತಲುಪಿದ್ದಾರೆ. ಗುರುವಾರ ಬೆಳಗ್ಗೆ ದಟ್ಟಣೆ ಸ್ವಲ್ಪ ಕಡಿಮೆಯಾಗಿದೆ. ಯಾತ್ರಿಕರು ಹೆಚ್ಚು ಕಾಯದೆ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಬೆಳಗ್ಗೆ 9ರ ವರೆಗೆ 37 ಸಾವಿರ ಭಕ್ತರು ಸನ್ನಿಧಾನ ತಲುಪಿದ್ದಾರೆ. ಪುಲ್ಲುಮೇಡ್ ಕಾನನ ಹಾದಿಯ ಮೂಲಕ ಪ್ರತಿದಿನ ಸರಾಸರಿ 2,500 ಭಕ್ತರು ಆಗಮಿಸುತ್ತಿದ್ದಾರೆ.

Post a Comment

0 Comments