Ticker

6/recent/ticker-posts

Ad Code

ಶಂಕಿತ ರೇಬಿಸ್ ಹಿನ್ನಲೆ : ಪೆರ್ಲದಲ್ಲಿ ಬೀದಿ ನಾಯಿಗಳ ಹಿಡಿದು ಲಸಿಕೆ ವಿತರಣೆ


ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಂಕಿತ ರೇಬಿಸ್ ರೋಗದ ಬೀದಿನಾಯಿಗಳ ಕಾಟ ತೀವ್ರವಾಗಿ ಕಂಡು ಬಂದ ಕಾರಣ ರೋಗ ನಿರೋಧಕ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೆತ್ತಿಕೊಂಡಿದೆ. ಕಳೆದೆರಡು ದಿನಗಳಲ್ಲಿ  ನಾಯಿಗಳ ಹಾಟ್‌ಸ್ಪಾಟ್‌ಗಳ ಬಗ್ಗೆ ಮಾಹಿತಿ ಪಡೆದುಕೊಂಡು  ಪಂಚಾಯತ್‌ ವ್ಯಾಪ್ತಿಯಲ್ಲಿ ಬೀದಿ ನಾಯಿಗಳನ್ನು ಹಿಡಿದು ರೇಬೀಸ್ ಲಸಿಕೆ ನೀಡಲಾಗಿದೆ.

ಪೆರ್ಲ ಪೇಟೆಯಲ್ಲಿ ಶಂಕಿತ ರೇಬಿಸ್ ನಾಯಿಯೊಂದು ಮಕ್ಕಳ ಸಹಿತ ಹಲವು ಮಂದಿಗಳಿಗೆ ಕಚ್ಚಿ ಗಾಯಗೊಳಿಸಿತ್ತು. ಅದೇ ರೀತಿ ಉಕ್ಕಿನಡ್ಕ,ಬೆದ್ರಂಪಳ್ಳ ಮೊದಲಾದೆಡೆ ಬೀದಿ ನಾಯಿ ಉಪಟಳ ಅಧಿಕವಾಗುತ್ತಿರುವ ಬಗ್ಗೆ  ವಿಶೇಷ ಚಾನೆಲ್ ವರದಿ ಮಾಡಿತ್ತು.

Post a Comment

0 Comments