Ticker

6/recent/ticker-posts

Ad Code

ನಾಗರಕಟ್ಟೆ : ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕ ಪ್ರಾರ್ಥನಾ ಮಂಟಪ ಲೋಕಾರ್ಪಣೆ

 

ಕಾಸರಗೋಡು : ನಾಗರಕಟ್ಟೆಯ ರಾಮಕ್ಷತ್ರಿಯ ಸಮಾಜದ, ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕಕ್ಕೆ ಪ್ರಾರ್ಥನಾ ಮಂಟಪ ನಿರ್ಮಿಸಿ ಸಮರ್ಪಿಸಲಾಯಿತು. ಕನ್ನಡ ಭವನದ ಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್, ಸಂದ್ಯಾ ರಾಣಿ ಟೀಚರ್, ಸನತ್ ಕುಮಾರ್ ಬಿ. ಇ. ಕಾರ್ತಿಕ್  ಬಿ. ಇ. ಇವರ ಆರ್ಥಿಕ ವಿನಿಯೋಗದಲ್ಲಿ ನಿರ್ಮಿಸಿದ ಪ್ರಾರ್ಥನಾ ಮಂಟಪವನ್ನು ಎಡನೀರು ಮಠಾಧೀಶರಾದ  ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ದೀಪ ಬೆಳಗಿಸಿ  ಉದ್ಘಾಟಿಸಿದರು. ಭಿಕ್ಷು ಅಮೃತ ಶಿಲಾ ಪ್ರತಿಮೆಗೆ ತುಳಸೀ ಹಾರಾರ್ಪಣೆ ಮಾಡಿದ ಶ್ರೀಗಳು, ಭಿಕ್ಷು ಸ್ಥಾಪಿತ ಶ್ರೀ ಶಾರದಾ ಭಜನಾಶ್ರಮದ ಆಡಳಿತ ಸಮಿತಿ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ನಾಗರಕಟ್ಟೆ ಇವರಿಗೆ ಕಟ್ಟಡದ ಚಿತ್ರ ಫಲಕ ನೀಡಿ ಪ್ರಾರ್ಥನಾ ಮಂಟಪ ಹಸ್ತಾಂತರಿಸಿದರು. ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕನ್ನಡ ಭವನದ ಪದಾಧಿಕಾರಿಗಳಾದ ಸಂದ್ಯಾ ರಾಣಿ ಟೀಚರ್, ಪ್ರಾಂಶುಪಾಲ ರಾಜೇಶ್ ಚಂದ್ರ ಕೆ. ಪಿ, ಡಾ. ಎಚ್ ಪ್ರಭಾಕರ್, ಡಾ. ರವೀಂದ್ರ ಜೆಪ್ಪು. ರೇಖಾ ಸುದೇಶ್ ರಾವ್ ಮಂಗಳೂರು, ಪ್ರದೀಪ್ ನಾಯ್ಕ್, ನವೀನ್ ನಾಯ್ಕ್, ನಾಗರಕಟ್ಟೆ, ಹಾಗೂ ದೇವಸ್ಥಾನ ಸಮಿತಿಯ ಲಕ್ಷ್ಮಣ ಬೀರಂತಬೈಲ್, ನಿರಂಜನ್ ಕೊರೆಕ್ಕೋಡು, ಪ್ರದಾನ ಕಾರ್ಯದರ್ಶಿ ದಿನೇಶ್ ನಾಗರಕಟ್ಟೆ, ಮೋಹನ್ ದಾಸ್, ರೋಹಿತಾಕ್ಷ, ಪ್ರಕಾಶ್ ಚಂದ್ರ ಉಳ್ಳಾಲ ರಾಜ್ ಕುಮಾರ್ ನಾಗರಕಟ್ಟೆ ಉದಯ, ವಿನೋದ್ ನಾಗರಕಟ್ಟೆ ಮುಂತಾದವರಿದ್ದರು.

Post a Comment

0 Comments