ಕಾಸರಗೋಡು : ಫೆ.1ರಂದು ಸೂರಂಬೈಲ್ ಕಣ್ಣೂರು ಎಡನಾಡು ಸೇವಾ ಸಹಕಾರಿ ಬ್ಯಾಂಕ್ ಹಾಲ್‌ನಲ್ಲಿ ಅಗಸರ ಯಾನೆ ಮಡಿವಾಳರ ಸಂಘದ 13ನೇ ವರ್ಷದ ಸಮಾಜೋತ್ಸವ ಹಾಗೂ ಮಾಚಿದೇವ ಜಯಂತಿ ದಿನಾಚರಣೆ ಜರಗಲಿದೆ. ಬೆಳಿಗ್ಗೆ 10.30ಕ್ಕೆ ಸಂಘದ ಅಧ್ಯಕ್ಷರು ಧ್ವಜಾರೋಹಣಗೈಯಲಿದ್ದು, 11.30ರಿಂದ ಸಂಘದ ಅಧ್ಯಕ್ಷ ಕೆ. ಬಾಬು ನೀರ್ಚಾಲು ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಹುಬ್ಬಳ್ಳಿ ಹೋಟೆಲ್ ಉದ್ಯಮಿ ಡಾ| ಸರಳಾ ರಮೇಶ್ ಕುಂದರ್ ಉದ್ಘಾಟಿಸಲಿದ್ದು, ನಿವೃತ್ತ ಶಾಲಾ ಪ್ರಾಧ್ಯಾಪಕ ರಾಮಕೃಷ್ಣ ಕೊಂಡಾಣ ಮುಖ್ಯ ಅತಿಥಿಗಗಳಾಗಿರುವರು. ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಮೈನ ಕುಂಬಳೆ ಹಾಗೂ ಉಪಾಧ್ಯಕ್ಷ ಶಿವರಾಮ ಮೆಣಸಿನಪಾರೆ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ರಾಮ ಸಾಲಿಯಾನ್, ಬಾರೆಕ್ಕು ಮೀಂಜ, ಪ್ರಕಾಶ್ ಅಮೈ, ಐತ್ತಪ್ಪ ಸಾಲಿಯಾನ್ ಕನ್ಯಪ್ಪಾಡಿ, ರಾಜೀವಿ ಪುತ್ತಿಗೆ ಮೊದಲಾದ ಸಮಾಜದ ಹಿರಿಯರಿಗೆ ಗೌರವಾರ್ಪಣೆ ನಡೆಯಲಿದೆ. ಬಹುಮುಖ ಪ್ರತಿಭೆಯ ಸಮಾಜ ಸೇವಕ ವಿಶ್ವನಾಥ ಕಾಟಿಪಳ್ಳ ಇವರನ್ನು ಸನ್ಮಾನಿಸಲಾಗುವುದು. ಸಂಘದ ಜಿಲ್ಲಾ ಕಾರ್ಯದರ್ಶಿ ಸದಾಶಿವ ಪ್ರತಾಪ ನಗರ ವರದಿ ವಾಚನ ಮತ್ತು ಲೆಕ್ಕ ಮಂಡನೆ ಮಾಡಲಿರುವರು. ಮಧ್ಯಾಹ್ನ 12.30ರಿಂದ ಸಮಾಜದ ಮಕ್ಕಳಿಂದ ನೃತ್ಯ ವೈವಿಧ್ಯ, ಗುರು ಮಾಚಿದೇವ ಕರೋಕೆ ಮ್ಯೂಸಿಕ್ ತಂಡದ ಸಂಗೀತ ರಸಮಂಜರಿ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ, ವಿದ್ಯಾನಿಧಿ ವಿತರಣೆ ನಡೆಯಲಿದೆ. ಸಂಜೀವ ಮಾನ್ಯ ಸ್ವಾಗತಿಸಿ, ಸಂದೇಶ್ ಕುಂಬಳೆ ವಂದಿಸುವರು. ನಾರಾಯಣ ಮಾಸ್ತರ್, ಮುರಿಯಂಕೂಡ್ಲು, ರಜನಿ ಪೆರ್ಲ, ರಾಮ ಮುರಿಯಂಕೂಡ್ಲು ನಿರೂಪಣೆ ಮಾಡಲಿರುವರು.

0 Comments