ಮುಂಡಿತ್ತಡ್ಕ: ಹುಲ್ಲು ಕಡಿದು ಸಂಗ್ರಹಿಸುವ ವೇಳೆ ತೋಟದ ಬದಿ ಜಾರಿ ಬಿದ್ದು ಗಂಭೀರ ಗಾಯಗೊಂಡ ವೃದ್ಧರೋರ್ವರು ಚಿಕಿತ್ಸೆಯ ನಡುವೆ ಮೃತಪಟ್ಟ ಪ್ರಕರಣ ವರದಿಯಾಗಿದೆ. ಮುಂಡಿತ್ತಡ್ಕ ಸಮೀಪದ ಮಲಂಗರೆ ನಿವಾಸಿಯಾದ ಮುಹಮ್ಮದ್ (75) ಮೃತ ವ್ಯಕ್ತಿ . ಈ ತಿಂಗಳ 28 ರ ಸಂಜೆ, ತಮ್ಮ ಮನೆಯ ಬಳಿಯ ಮಣ್ಣಿನ ಹಾದಿಯಲ್ಲಿ ಕುಳಿತು ಹುಲ್ಲು ಸಂಗ್ರಹಿಸುವಾಗ ಜಾರಿ ಬಿದ್ದರು. ಬಿದ್ದ ಪರಿಣಾಮ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ನಿಧನರಾದರು. ಮೃತರು ಪತ್ನಿ ಬಿಫಾತಿಮಾ. ಮಕ್ಕಳಾದ ಲತೀಫ್, ಬಶೀರ್, ಅಜೀಜ್, ಆಯೇಷಾ, ಅವ್ವಮ್ಮ, ನಫೀಸಾ, ಮೈಮುನಾ, ಸಮೀರಾ. ಸೊಸೆಯಂದಿರಾದ ಕಲಂದರ್ ಬೀವಿ, ಫಯೀಸಾ, ತಸ್ರೀನಾ, ಅಳಿಯಂದಿರಾದ ಅಬ್ದುರಹ್ಮಾನ್ (ಶೇಣಿ), ಇಸ್ಮಾಯಿಲ್ (ಬಂದ್ಯೋಡ್ ), ಜಬ್ಬಾರ್ (ಸೀತಾಂಗೋಳಿ), ಖಾಲಿದ್ (ಆಲಂಪಾಡಿ) ಎಂಬಿವರನ್ನಗಲಿದ್ದಾರೆ.

0 Comments