Ticker

6/recent/ticker-posts

Ad Code

ಮಂಜೇಶ್ವರದಲ್ಲಿ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಸಾಗಿಸುತ್ತಿದ್ದ ದಾಖಲೆ ರಹಿತ 30 ಲಕ್ಷ ರೂ. ನಗದು ವಶ : ಒರ್ವನ ಸೆರೆ

 

ಮಂಜೇಶ್ವರ: ಮಂಜೇಶ್ವರ ಅಬಕಾರಿ ಚೆಕ್ ಪೋಸ್ಟ್ ನಲ್ಲಿ ನಡೆಸಿದ ವಾಹನ ತಪಾಸಣೆಯಲ್ಲಿ 30 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಕೆಎಸ್ಆರ್ ಟಿಸಿ ಬಸ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹಣವನ್ನು ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮನ್ನ ತಾಲೂಕಿನ ವಡಕ್ಕಕರ ಎರುಂಬತ್ತುವೀಟಿಲ್ ನಲ್ಲಿ ಅಬ್ದುಲ್ ರೆಹಮಾನ್ ಅವರ ಪುತ್ರ ಹಮ್ಸಾ (64) ಅವರನ್ನು ವಶಕ್ಕೆ ಪಡೆಯಲಾಗಿದೆ. ಹಮ್ಸಾ ಮತ್ತು ನಗದನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅಬಕಾರಿ ತಂಡ ತಿಳಿಸಿದೆ. ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ನಡೆಸಿದ ನಿಯಮಿತ ವಾಹನ ತಪಾಸಣೆಯ ಸಮಯದಲ್ಲಿ ತಲಪ್ಪಾಡಿಯಿಂದ ಕಾಸರಗೋಡಿಗೆ ಹೋಗುತ್ತಿದ್ದ ರಾಜ್ಯ ಬಸ್ ನಿಂದ ನಗದು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ತಂಡ ತಿಳಿಸಿದೆ. ಅಬಕಾರಿ ವೃತ್ತ ನಿರೀಕ್ಷಕ ಶಿಜಿನ್ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಮ್ಸಾ ಅವರನ್ನು ವಶಕ್ಕೆ ಪಡೆಯಲಾಗಿದೆ. ಪರಿಶೀಲನೆಯ ಸಮಯದಲ್ಲಿ ದಾಖಲೆಗಳಿಲ್ಲದೆ ನಗದು ಪತ್ತೆಯಾಗಿದೆ ಎಂದು ಅಬಕಾರಿ ದಳ ತಿಳಿಸಿದೆ.

Post a Comment

0 Comments