Ticker

6/recent/ticker-posts

Ad Code

ಫೆ.1ರಿಂದ 5ರ ತನಕ ಇಡಿಯಡ್ಕ ಜಾತ್ರೋತ್ಸವ

 

ಪೆರ್ಲ : ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದಲ್ಲಿ ಫೆ.1ರಿಂದ 5ರ ತನಕ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಮತ್ತು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಜರಗಲಿದೆ. ಇದರ ಸಿದ್ದತೆಗಳು ಪೂರ್ಣಗೊಳ್ಳುತ್ತಿದೆ.

ಫೆ.1ರಂದು ಬೆಳಗ್ಗೆ ಗಂಟೆ 9ಕ್ಕೆ ಗಣಪತಿ ಹವನ 9.30ಕ್ಕೆ ಧ್ವಜಾರೋಹಣ, ನವಕಾಭಿಷೇಕ, 11.30ಕ್ಕೆ  ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಿಂದ ಹಸಿರುವಾಣಿ ಹೊರೆ ಕಾಣಿಕೆ, ತಂತ್ರಿವರ್ಯರಿಂದ ಉಗ್ರಾಣ ಭರಣ, ಬೆಳಗ್ಗೆ ಗಂಟೆ 10.00 ರಿಂದ 11.00 : ಭಕ್ತಿಗಾನ ಕು। ಸುಮಶ್ರೀ ಮತ್ತು ಬಳಗ ಇಡಿಯಡ್ಕ, 11.00 ರಿಂದ 12.30 : ಸಂಗೀತ ಕಾರ್ಯಕ್ರಮ-ನಾದವಲ್ಲರಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವಯಲಿನ್ ವಾದನದ ಝಲಕ್ ಪ್ರಸ್ತುತಿ : ಕು। ಅನ್ವಿತಾ ಶೇಣಿ (ವಿದ್ವಾನ್ ಶ್ರೀ ಪ್ರಭಾಕರ ಕುಂಜಾರು ಮತ್ತು ಶ್ರೀಮತಿ ನಿರ್ಮಲಾ ಪುರುಷೋತ್ತಮ ಭಟ್, ಪೆರ್ಲ ಇವರ ಶಿಷ್ಯೆ). ಮಧ್ಯಾಹ್ನ ಗಂಟೆ 1.30 ರಿಂದ 3.30 : ಶ್ರೀ ವಿಠಲ ನಾಯಕ್ ಮತ್ತು ಬಳಗ, ವಿಟ್ಲ ಇವರಿಂದ ಗೀತಾ ಸಾಹಿತ್ಯ ಸಂಭ್ರಮ,  ಸಂಜೆ 5 ಗಂಟೆಯಿಂದ ಭಜನೆ,  7.30ಕ್ಕೆ ರಂಗಪೂಜೆ, ರಾತ್ರಿ ಗಂಟೆ 7.00 ರಿಂದ 7.30ರ ವರೆಗೆ ಶ್ರೀ ಅಯ್ಯಪ್ಪ ಸ್ವಾಮಿ ಕೈಕೊಟ್ಟಿಕಳಿ ತಂಡ, ಪೆರ್ಲ ಇವರಿಂದ ಕೈಕೊಟ್ಟಿ ಕಳಿ, ರಾತ್ರಿ ಗಂಟೆ 8ರಿಂದ 'ಕಲಾಸಂಗಮ' ಕಲಾವಿದರಿಂದ ಶ್ರೀ ವಿಜಯಕುಮಾರ್ ಕೊಡಿಯಾಲ್‌ ಬೈಲ್ ನಿರ್ದೇಶನದ ವಿಭಿನ್ನ ಶೈಲಿಯ ತುಳು ನಾಟಕ 'ಶಿವದೂತೆ ಗುಳಿಗೆ' ಪ್ರದರ್ಶನಗೊಳ್ಳಲಿದೆ. 

ಫೆ.2ಕ್ಕೆ ಬೆಳಗ್ಗೆ ಗಂಟೆ 8ರಿಂದ 108 ಕಾಯಿ ಗಣಪತಿ ಹವನ, ವಿವಿಧ ಭಜನಾ ಸಂಘಗಳಿಂದ ಭಜನೆ, ಮಧ್ಯಾಹ್ನ ಗಂಟೆ 11 ರಿಂದ  ಎಸ್.ಜಿ.ಆರ್. ಮೆಲೊಡೀಸ್, ಅಡ್ಯನಡ್ಡ ಇವರಿಂದ ಭಕ್ತಿಗಾನ ಸುಧಾ, ಮಧ್ಯಾಹ್ನ ಗಂಟೆ 2 ರಿಂದ  ಡಾ. ವಾಣಿಶ್ರೀ ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ಸಾಹಿತ್ಯ ಗಾನವೈಭವ, ರಾತ್ರಿ ಗಂಟೆ 8 ರಿಂದ 'ಶಿವಾಂಜಲಿ' ಕಲಾಕೇಂದ್ರ (ರಿ) ಪೆರ್ಲ ಇದರ ನಿರ್ದೇಶಕಿ ವಿದುಷಿ ಶ್ರೀಮತಿ ಕಾವ್ಯಾ ಭಟ್ ಇವರ ಶಿಷ್ಯವೃಂದದವರಿಂದ 'ನೃತ್ಯಪಲ್ಲವ' ಭರತನಾಟ್ಯ, ಜಾನಪದ ನೃತ್ಯ ಪ್ರದರ್ಶನ. 

ಫೆ.3ಕ್ಕೆ ಪ್ರಾತಃ ಗಂಟೆ 6ರಿಂದ ಚಂಡಿಕಾ ಹವನ, ಬೆಳಗ್ಗೆ ಗಂಟೆ 11ಕ್ಕೆ ಪೂರ್ಣಾಹುತಿ, ಗಂಟೆ 11 ರಿಂದ : ತುಲಾಭಾರ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಸಂಜೆ ಗಂಟೆ 6ರಿಂದ ಕಜಂಬು ಉತ್ಸವ, ರಾತ್ರಿ  7.30ಕ್ಕೆ  ಮಹಾಪೂಜೆ, ರಾತ್ರಿ ಗಂಟೆ 8ಕ್ಕೆ ಶ್ರೀ ಉಳ್ಳಾಲ್ತಿ ಭಂಡಾರ ಹೊರಡುವುದು, ಅಶ್ವರಥ ಸವಾರಿ, ಉಳ್ಳಾಲ್ತಿ ನೇಮ, ಪ್ರಸಾದ ವಿತರಣೆ. 

ಫೆ 4ರಂದು ಬೆಳಗ್ಗೆ ಗಂಟೆ 10ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ವಿವಿಧ ಭಜನಾ ಸಂಘಗಳಿಂದ ಭಜನೆ, ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ರಾತ್ರಿ ಗಂಟೆ 8ರಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಹೊರಡುವುದು, ರಾತ್ರಿ ಗಂಟೆ 8.30ಕ್ಕೆ ತೊಡಂಬಲ್, ಕುಳಿಚ್ಚಾಟ, ಸಂಜೆ ಗಂಟೆ 6ರಿಂದ ಶ್ರೀ ಉಳ್ಳಾಲ್ತಿ ಮಹಿಳಾ ಸಂಘ, ಇಡಿಯಡ್ಕ ಇವರಿಂದ ತಿರುವಾದಿರ, ಸಾಯಂ, ಗಂಟೆ 7.00 ರಿಂದ ಕಲಾತಪಸ್ವಿ, ನಾಟ್ಯಸಿಂಧು, ನಾಟ್ಯನಿಲಯ ಗುರು  ಬಾಲಕೃಷ್ಣ ಮಂಜೇಶ್ವರ ಇವರ ನಿರ್ದೇಶನದಲ್ಲಿ ಭರತನಾಟ್ಯ, ನೃತ್ಯ ಆಕರ್ಷಣಂ'. 

ಫೆ.5ಕ್ಕೆ ಬೆಳಗ್ಗೆ ಗಂಟೆ 9ರಿಂದ  ಶ್ರೀ ವಿಷ್ಣುಮೂರ್ತಿ ದೈವದ ಕೋಲ, ಪ್ರಸಾದ ವಿತರಣೆ, ಮಧ್ಯಾಹ್ನ ಗಂಟೆ 12.30ಕ್ಕೆ ಧ್ವಜಾವರೋಹಣ, ಸಂಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆಯೊಂದಿಗೆ ಉತ್ಸವ ಸಮಾಪ್ತಿಗೊಳ್ಳಲಿದೆ.

Post a Comment

0 Comments