ಮಂಜೇಶ್ವರ : ಶ್ರೀ ಧೂಮಾವತಿ ಬಂಟ ದೈವಸ್ಥಾನ ಉದ್ಯಾವರ ಮಂಜೇಶ್ವರ ಇದರ ವಾರ್ಷಿಕ ಜಾತ್ರಾ ಮಹೋತ್ಸವ ಫೆಬ್ರವರಿ 21ಕ್ಕೆ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು. ದೈವಸ್ಥಾನ ಅಧ್ಯಕ್ಷ ವಿಜಯ ಕುಮಾರ್ ಉಳ್ಳಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವ ಅಧ್ಯಕ್ಷ ವಿಶ್ವನಾಥ್ ಉಚ್ಚಿಲ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ದೈವಸ್ಥಾನ ಗುರಿಕಾರ ನಾರಾಯಣ ಗುರಿಕಾರ, ಉಪಾಧ್ಯಕ್ಷ ಪದ್ಮನಾಭ ಪೊಯ್ಯೆ, ಮಾಧವ ಉದ್ಯಾವರ, ಖಜಾಂಚಿ ವಸಂತ ಉಚ್ಚಿಲ್, ಕನಿಲ ಶ್ರೀ ಭಗವತಿ ಕ್ಷೇತ್ರದ ಪುನರ್ನಿರ್ಮಾಣ ಸಮಿತಿಯ ಉಪಾಧ್ಯಕ್ಷ ಗಣೇಶ್ ಪಾವೂರು, ರಾಘವ, ಸೀತಾರಾಮ ಮಜಿಬೈಲ್, ವೇದಾವತಿ ಸೋಮೇಶ್ವರ ಮುಂತಾದವರು ಉಪಸ್ಥಿತರಿದ್ದರು.

0 Comments