Ticker

6/recent/ticker-posts

Ad Code

ಕಾನ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಶ್ರೀ ಮಲರಾಯಿ ದೈವದ ಪ್ರತಿಷ್ಠೆ

 

ಪೆರ್ಲ : ಸೇರಾಜೆ ಸಮೀಪದ ಕಾನ ಶ್ರೀ ಮಲರಾಯಿ ಧೂಮಾವತೀ ಜಟಾಧಾರಿ ನಾಗ ಪರಿವಾರ ದೈವಸ್ಥಾನದ 9ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿ ಸಂಪನ್ನಗೊಂಡಿತು. ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ನೇತೃತ್ವದಲ್ಲಿ ಶ್ರೀಮಲರಾಯಿ ದೈವದ ಪ್ರತಿಷ್ಠೆ ನೆರವೇರಿತು. 

ಇದರಂಗವಾಗಿ ಗಣಪತಿ ಹೋಮ, ಕಲಶಪೂಜೆ, ನಾಗನ ಪುನ‌ರ್ ಪ್ರತಿಷ್ಠೆ ಶ್ರೀ ಮಲರಾಯಿ ದೈವದ ಪ್ರತಿಷ್ಠೆ ಬ್ರಹ್ಮಕಲಶ ಅಭಿಷೇಕ, ವೆಂಕಟ್ರಮಣ ದೇವರ ಹರಿಸೇವೆ, ದೈವಗಳಿಗೆ ತಂಬಿಲ, ಸಂಜೆ ರಾಹುಗುಳಿಗ ಬನದಲ್ಲಿ ತಂಬಿಲ, ರಾತ್ರಿ ಹಿರಿಯರಿಗೆ ಬಡಿಸುವ ಕಾರ್ಯಕ್ರಮ ನಡೆಯಿತು. ಮರುದಿನ ಶ್ರೀಮಲರಾಯಿ ದೈವ, ಶ್ರೀಧೂಮಾವತಿ ದೈವ ನೇಮ ಹಾಗೂ ಪರಿವಾರ ದೈವಗಳ ಕೋಲಗಳು ಜರಗಿತು.

Post a Comment

0 Comments