ಕಾಸರಗೋಡು : ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಕನ್ನಡ ಗ್ರಾಮದ 35ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60 ನೇ ಜನ್ಮ ವರ್ಷಾಚರಣೆಯನ್ನು ಗೋ- ಸೇವೆಯ ಮೂಲಕ ಗುರುತಿಸಿಕೊಳ್ಳುವುದಕ್ಕಾಗಿ ಕಾಸರಗೋಡು ಕನ್ನಡ ಗ್ರಾಮದ ಆವರಣದಲ್ಲಿ 2025 ನವಂಬರ್ 4 ರಂದು "ಕಾಸರಗೋಡು ಗೋ-ಕುಟೀರ"ಕ್ಕೆ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಭೂಮಿ ಪೂಜೆ ಸಲ್ಲಿಸಿ, "ಕಾಸರಗೋಡು ಗೋ-ಕುಟೀರದ ನಿರ್ಮಾಣಕ್ಕೆ ಚಾಲನೆ ನೀಡಿದರು.
ಜಗಜ್ಜನನಿ ಗೋಮಾತೆಯ ಆಶೀರ್ವಾದವನ್ನು ಪಡೆಯುವುದಕ್ಕಾಗಿ ದೇಸಿ ಗೋವುಗಳನ್ನು ಉಳಿಸಿ ಬೆಳೆಸುವುದಕ್ಕಾಗಿ ಕಾಸರಗೋಡು ಗೋ-ಕ್ಷೇತ್ರ, ಗೋ-ಕುಟೀರವನ್ನು ಒಂದು ಧಾರ್ಮಿಕ ಶ್ರದ್ದಾ ಕೇಂದ್ರವನ್ನಾಗಿ ರೂಪುಗೊಳಿಸುವುದಕ್ಕಾಗಿ ಸಾರ್ವಜನಿಕರು, ಹಾಗೂ ಗೋ ಭಕ್ತರ ಸಹಕಾರದಿಂದ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಬೃಹತ್ ಕಾರ್ಯ ಯೋಜನೆಯನ್ನು ಕೈಗೊಳ್ಳಲಾಗಿದೆ.
ರಾಜ್ಯದ ಪ್ರತಿಯೊಂದು ಮನೆ ಮನೆಗಳಿಂದ ಗೋವುಗಳಿಗೆ ಭಕ್ತಿ ಪೂರ್ವಕವಾಗಿ ಮೇವು, ಗೋ-ಆಹಾರವನ್ನು ಭಕ್ತಿ ಶ್ರದ್ಧೆಯಿಂದ "ಹೊರೆಕಾಣಿಕೆ-ಹಸಿರು ವಾಣಿ" ಮಾದರಿಯಲ್ಲಿ ದಿನನಿತ್ಯ ಗೋ ಸೇವೆಯನ್ನು ಸಲ್ಲಿಸುವ ಮೂಲಕ ಗೋ- ಸೇವಾ ಅಭಿಯಾನವನ್ನು ಪ್ರಾರಂಭಿಸುವ ಉದ್ದೇಶವನ್ನು ಹೊಂದಲಾಗಿದೆ.
ಗೋ- ಭಕ್ತರ ಕುಟುಂಬಸ್ಥರ ಮಕ್ಕಳಿಗೆ ದೇಸಿ ಗೋವಿನ ಹಾಲಿನ ಬಳಕೆಯ ಉದ್ದೇಶದಿಂದ ಹಿಂದು ಸಮಾಜದ ಪ್ರತಿ ಕುಟುಂಬದವರು, ಕ್ಷೇತ್ರಗಳು, ಮಠ, ಮಂದಿರ, ದೈವಸ್ಥಾನ, ದೇವಸ್ಥಾನಗಳ ಧಾರ್ಮಿಕ ಉತ್ಸವ ಕಾರ್ಯಕ್ರಮಗಳಿಗೆ ಗೋಮೂತ್ರ, ಪಂಚಗವ್ಯ ಹಾಗೂ ಗೋ-ಸೆಗಣಿ, ಗೋಮಯ ಪೂಜಾ ಇತ್ಯಾದಿ ಅವಶ್ಯಕತೆ ಇರುವವರಿಗೆ, ನಮ್ಮ ಕಾಸರಗೋಡು "ಗೋ-ಕುಟೀರ"ದಲ್ಲಿ ದಿನನಿತ್ಯ ನಿರಂತರವಾಗಿ ದೊರಕುವಂತೆ ಮಾಡಲು ಉದ್ದೇಶಿಸಲಾಗಿದೆ ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.

0 Comments