Ticker

6/recent/ticker-posts

Ad Code

ಪೆರ್ಲ ಎಲ್ ಪಿ ಶಾಲಾ ಮಕ್ಕಳ ಮನೋಜ್ಞ ಅಭಿನಯದ ಮಾರ್ದನಿ ' ಕೊಕ್ಕೊರೇ ಕೋ... '


ಪೆರ್ಲ : ಸತ್ಯನಾರಾಯಣ ಎಎಲ್ ಪಿ ಶಾಲಾ ಮಕ್ಕಳ ಲೀಲಾಜಾಲ ಅಭಿನಯವೇ ಮುಖ್ಯ ಕೇಂದ್ರವಾಗಿ ಕೊಕ್ಕೋರೇ....ಕೋ  ಮಕ್ಕಳ ನಾಟಕ ಪ್ರೇಕ್ಷಕರ ಮನಗೆದ್ದಿದೆ. ಲೇಖಕಿ ಅಕ್ಷತಾರಾಜ್ ರವರು ಜಾನಪದ ಕಥೆಯೊಂದರ ಎಳೆಯನ್ನು  ಬರೆದ ಈ ನಾಟಕ ಹಾಸ್ಯಮಿಶ್ರಿತವಾಗಿ ಮನರಂಜಿಸಿತ್ತು. ಪ್ರಸ್ತುತ ವಿದ್ಯಾಮಾನಗಳ ಮೇಲೆ ಬೆಳಕು ಚೆಲ್ಲುವಂತೆ ಸಮರ್ಥವಾಗಿ  ರಂಗನಿರ್ದೇಶಕ ಉದಯ ಸಾರಂಗ ಈ ನಾಟಕವನ್ನು ನಿರ್ದೇಶಿಸಿದ್ದಾರೆ. ಆಕರ್ಷಕವಾದ ರಂಗವಿನ್ಯಾಸ ರಂಗಪರಿಕರಗಳಿಂದ ವಿಶೇಷ ಮೆರುಗು ನೀಡುವಲ್ಲಿ ಕಿರಣ್ ಕಲಾಂಜಲಿಯವರು ಕೆಲಸ ಮಾಡಿದ್ದಾರೆ. ಸಂಗೀತ ಸಂಕಲನವನ್ನು ಕಲಂದರ್ ಕಂದಲ್ ರವರು ಮಾಡಿದ್ದಾರೆ. ನಾಟಕದ ಹಿಂದೆ ಶಾಲಾ ಪಿಟಿಎ ಅಧ್ಯಕ್ಷ ರಾಜೇಶ್ ಬಜಕೂಡ್ಲು ನೇತೃತ್ವ ನೀಡಿದ್ದಾರೆ. 

ಪಾತ್ರಗಳಿಗೆ ಜೀವ ನೀಡಿ  ಅಭಿನಯಿಸಿದ ಕಿರಿಯ ಪ್ರಾಥಮಿಕ ಶಾಲಾ ಪುಟ್ಟ ಮಕ್ಕಳು ಪುನೀತ್ ಸಾರಂಗ್ ಉಕ್ಕಿನಡ್ಕ, ಆಧೀಶ್ ಬಜಕೂಡ್ಲು, ಅನ್ವಿತ್ ಅಪ್ಪಯ್ಯ ಮೂಲೆ, ತಿಲಕ್ ರಾಜ್ ಪಳ್ಳಕಾನ, ಆಹಾನ್ ಪೆರ್ಲ, ವೀಕ್ಷಿತಾ ಬಜಕೂಡ್ಲು, ದಿಶಿಕಾ ಪಳ್ಳಕಾನ, ನಿರೀಕ್ಷ ಪೆರ್ಲ, ಅನನ್ಯ ಖಂಡಿಗೆ, ಸಮನ್ವಿ ಬಜಕೂಡ್ಲು, ಚೈತ್ರಾ ಅಬ್ಬಿಕಟ್ಟೆ, ಪ್ರತೀಕ್ಷಾ ಅಡ್ಕ, ಆರುಷ್ ಕಾಟುಕುಕ್ಕೆ.

ಕೋಳಿಗಳನ್ನು ಬೇಟೆಗಿಳಿದ ನರಿಗಳು  ಅತಿಯಾಸೆಗೆ ಒಳಪಟ್ಟು ಚಿನ್ನದ ಮೊಟ್ಟೆಗಾಗಿ ಕೋಳಿಯನ್ನು ಪೀಡಿಸುವುದು ಕಥೆಯಾದರೂ ಮನುಷ್ಯ ಜೀವನದ ವಿವಿಧ ಆಯಾಮಗಳ ಮೇಲೆ ವ್ಯಂಗ್ಯತೆಯನ್ನು ಸೂಚಿಸುತ್ತದೆ. ಕೋಳಿಶಾಪದಿಂದ ನರಿಗಳಿಗೆ ಅಪಾಯವಿದೆಯೆಂದು ಕೋಳಿ ಗುರೂಜಿಯ ಮಧ್ಯಸ್ತಿಕೆ ನರಿಗಳನ್ನು ಮೂಢನಂಬಿಕೆಗೆ ಒಳಪಡಿಸಿ ಕೋಳಿಗಳು ಗೆಲ್ಲುವ ಕಥಾಹಂದರ ಪ್ರಸ್ತುತ ಕಪಟ ಮಂತ್ರವಾದಿಗಳ ಪ್ರಕರಣಗಳನ್ನು ಬಯಲಿಗೆಳೆಯುತ್ತದೆ. 

ನಾಟಕ ಮಕ್ಕಳ ಮೇಲೆ ಯಾವುದೇ ದೋರಣೆಗಳನ್ನು ಬಿಂಬಿಸದೇ ಮನರಂಜಿಸಿ ಅಭಿನಯಿಸಲು ಪ್ರೇರೆಪಿಸುತ್ತದೆ. ಒಟ್ಟಿನಲ್ಲಿ ಕಾಸರಗೋಡಿನ ಮಕ್ಕಳ ರಂಗಭೂಮಿಗೆ ಇದೊಂದು ಹೊಸ ಪಾದಾರ್ಪಣೆಯಾಗಿದೆ ಎನ್ನಬಹುದು.

Post a Comment

0 Comments