Ticker

6/recent/ticker-posts

Ad Code

ನಾಳೆ ಇಡಿಯಡ್ಕದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ - ಸಭೆ

 

ಪೆರ್ಲ :  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮಂಜೇಶ್ವರ,  ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಜ್ಞಾನ ವಿಕಾಸ ಕೇಂದ್ರಗಳು, ಶೌರ್ಯ ವಿಪತ್ತು ಘಟಕ ಮತ್ತು ವೈಶಾಲಿ ನವಜೀವನ ಸಮಿತಿ, ಪೆರ್ಲ ವಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಪದ್ಮವಿಭೂಷಣ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಕೃಪಾಶೀರ್ವಾದದೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮದ ಜ.11ರಂದು ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದಲ್ಲಿ ಜರಗಲಿದೆ. ಬೆಳಗ್ಗೆ ಗಂಟೆ 8.00 ರಿಂದ ಶ್ರೀ ಅಯ್ಯಪ್ಪ ಸ್ವಾಮೀ ಭಜನಾ ಮಂದಿರ, ಬಣ್ಣುತ್ತಡ್ಕ ಇವರಿಂದ ಭಜನೆ, ಬಳಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ, 11 ಗಂಟೆಗೆ ಮಹಾಪೂಜೆ, 11.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದೆ. ಒಕ್ಕೂಟಗಳ ವಲಯ ಅಧ್ಯಕ್ಷ ಶ್ರೀಧರ ಮಣಿಯಾಣಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ನಿದೇರ್ಶಕ ಬಾಬು ನಾಯ್ಕ, ಇಡಿಯಡ್ಕ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಸದಾನಂದ ಶೆಟ್ಟಿ ಕುದ್ವ, ವೇದಮೂರ್ತಿ ಶ್ರೀ ಹರಿನಾರಾಯಣ ಮಯ್ಯ ಕುಂಬಳೆ, ಡಾ। ಸ್ವಪ್ನ ಜಯಗೋವಿಂದ ಉಕ್ಕಿನಡ್ಕ, ಜನಜಾಗೃತಿ ವೇದಿಕೆ, ಪೆರ್ಲ ವಲಯ ಅಧ್ಯಕ್ಷ ಬಿ.ಪಿ ಶೇಣಿ, ಭಜನಾ ಪರಿಷತ್‌, ಪೆರ್ಲ ವಲಯ ಅಧ್ಯಕ್ಷ ಶ್ರೀಧರ್ ಕುಕ್ಕಿಲ, ವಿಪತ್ತು ನಿರ್ವಹಣಾ ಘಟಕ ಪೆರ್ಲ ವಲಯ ಮಾಸ್ಟ‌ರ್ ಸುರೇಂದ್ರ ಶೇಣಿ, ವೈಶಾಲಿ ನವಜೀವನ ಸಮಿತಿ, ಪೆರ್ಲ ವಲಯ ಅಧ್ಯಕ್ಷ ಜಗದೀಶ್, ಪರ್ತಾಜೆ, ಮಂಜೇಶ್ವರ ತಾಲೂಕು ಯೋಜನಾಧಿಕಾರಿ ಶಶಿಕಲಾ ಸುವರ್ಣ, ವಲಯ ಮೇಲ್ವಿಚಾರಕಿ ಜಯಶ್ರೀ  ಮೊದಲಾದವರು ಭಾಗವಹಿಸುವರು. ಬಳಿಕ ಪ್ರಸಾದ ವಿತರಣೆ, ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗುವುದು.

Post a Comment

0 Comments