ವಿಟ್ಲ : ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಸೊಸೈಟಿ ಆವರಣದಿಂದ ಹುಲ್ಲು ಮೇಯಲು ಬಿಟ್ಟಿದ್ದ ದನಗಳನ್ನು ಕಳವುಗೈದ ಪ್ರಕರಣದಲ್ಲಿ ಯುವಕನೋರ್ವನನ್ನು ವಿಟ್ಲ ಪೋಲಿಸರು ಬಂಧಿಸಿದ್ದಾರೆ. ಝುಲ್ಫಾನ್ ಮಾಲಿಕ್ ಉಳ್ಳಾಲ್ ಬಂಧಿತ ಆರೋಪಿ. ಈತನಿಗೆ ರಿಮಾಂಡ್ ವಿಧಿಸಲಾಗಿದೆ. ವಿಟ್ಲ ಪೊಲೀಸ್ ಠಾಣಾ ಸರಹದ್ದಿನ ಪೆರುವಾಯಿ ನಿವಾಸಿಗಳಾದ ಗಣೇಶ ರೈ ಹಾಗೂ ನಾರಾಯಣ ನಾಯ್ಕ ಎಂಬುವವರ ಒಟ್ಟು 4 ದನಗಳು ಕಳ್ಳತನ ಆಗಿರುವುದರ ಬಗ್ಗೆ ಗಣೇಶ ರೈ ಎಂಬುವವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ಪ್ರಕರಣದ ಆರೋಪಿಯಾದ ಈ ಯುವಕನನ್ನು ಬಂಧಿಸಿದ ಪೋಲಿಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

0 Comments