Ticker

6/recent/ticker-posts

Ad Code

ಓಡಿಲ್ನಾಳದ ಸುಮಂತ್ ಅಸಹಜ ಸಾವಿನ ಶೀಘ್ರ ತನಿಖೆಗೆ ಆರ್. ಎಸ್. ಬಿ ಯುವ ಸಂಘ ಮೊಗೇರು ಒತ್ತಾಯ


 ಪೆರ್ಲ : ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಓಡಿಲ್ನಾಳ ಗ್ರಾಮದ ಸಂಬೊಳ್ಯದ ಸುಬ್ರಹ್ಮಣ್ಯ ಹಾಗೂ ಲತಾ ದಂಪತಿಯ ಪುತ್ರ ಸುಮಂತ್  ಧನುಪೂಜೆಗೆಂದು ಹೊರಟು ಅಸಹಜವಾಗಿ ಸಾವನ್ನಪ್ಪಿದ ಪ್ರಕರಣ ನಿಗೂಢತೆಯನ್ನು ಸೃಷ್ಠಿಸಿದ್ದು ಇದನ್ನು ಬೇಧಿಸಿ  ತನಿಖೆ ಚುರುಕುಗೊಳಿಸಬೇಕೆಂದು ಒತ್ತಾಯಿಸಿ ಮೊಗೇರು ಆರ್. ಎಸ್. ಬಿ ಯುವ ಸಂಘ  ಸಿ.ಐ ಹಾಗೂ ಡಿವೈಎಸ್ ಪಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಪ್ರತಿಭಾನ್ವಿತ ಬಾಲಕ ಸುಮಂತ್ ನ ಅಸಹಜ ಸಾವಿನ ತನಿಖೆ ಈ ಕ್ಷಣದವರೆಗೆ ಉತ್ತಮ ರೀತಿಯಲ್ಲಿ ನಡೆದಿದೆ ಮುಂದಿನ ತನಿಖೆಯು ನಿಷ್ಪಕ್ಷಪಾತವಾಗಿ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸುವಂತಾಗಲಿ ಆದುದರಿಂದ ತನಿಖೆಯನ್ನು ಚುರುಕುಗೊಳಿಸಿ ಆದಷ್ಟು ಬೇಗನೆ ಅಪರಾಧಿಗಳನ್ನು ಕಾನೂನಿನ ಮುಂದೆ ತಂದು, ದುರುಳರಿಗೆ ಸೂಕ್ತ ಶಿಕ್ಷೆ ಕೊಡಿಸಿ, ದಿವಂಗತನಿಗೆ ಹಾಗೂ ಆತನ ಹೆತ್ತವರಿಗೆ ನ್ಯಾಯ ದಯಪಾಲಿಸುವಂತೆ ಮನವಿ ಮಾಡಲಾಗಿದೆ.

ಆರ್ ಎಸ್ ಬಿ ಯುವ ಸಂಘ ಮೊಗೇರುವಿನ ಪರವಾಗಿ 10 ಜನರ ತಂಡ   ಸುಮಂತ್ ಮನೆ ಭೇಟಿ ಮಾಡಿ ಬಳಿಕ ಬೆಳ್ತಂಗಡಿ ಸಿಐ  ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಅಪರಾಧಿಗಳನ್ನು ಕೂಡಲೇ ಬಂದಿಸುವಂತೆ ಒತ್ತಾಯಿಸಲಾಗಿದೆ. ಸಾಮಾಜಿಕ ಮುಂದಾಳು ನಾರಾಯಣ ನಾಯಕ್ ನಲ್ಕ ಕೇರಿ ಮೂಲೆ ನೇತೃತ್ವದಲ್ಲಿ ಸಿಐ ಜೊತೆ ತನಿಖೆಯ ಮಾತುಕತೆ ನಡೆಲಾಗಿದೆ.

Post a Comment

0 Comments