Ticker

6/recent/ticker-posts

Ad Code

ಪೆರಡಾಲ ಶ್ರೀ ಕ್ಷೇತ್ರ ಬ್ರಹ್ಮಕಲಶೋತ್ಸವ : ಕೊಂಡೆವೂರು ಶ್ರೀಗಳ ಆಹ್ವಾನ


 ಬದಿಯಡ್ಕ : ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರ ಬ್ರಹ್ಮಕಲಶೋತ್ಸವ ಸಿದ್ಧತೆಗಳು ಭರಪೂರವಾಗಿ ಸಾಗುತ್ತಿದ್ದು ಬೃಹತ್ ಕಾರ್ಯಕ್ರಮಕ್ಕೆ ನಾಡಿನ‌ ನಾನಾ ಕಡೆಯ ಯತಿಗಳು,ಸಾಧು ಸಂತರನ್ನು,ಗಣ್ಯರನ್ನು ಆಹ್ವಾನಿಸಲಾಗಿದೆ. ಇದರಂತೆ ಕೊಂಡೆವೂರು ನಿತ್ಯಾನಂದ ಆಶ್ರಮದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮಿಗಳನ್ನು ಭೇಟಿ ಮಾಡಿ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಆಹ್ವಾನಿಸಲಾಯಿತು. ಮೊಕ್ತೇಸರ , ಬ್ರಹ್ಮಕಲಶೋತ್ಸವ ಕಾರ್ಯಧ್ಯಕ್ಷ ಜಗನ್ನಾಥ ರೈ ಪೆರಡಾಲ ಗುತ್ತು, ರಕ್ಷಾಧಿಕಾರಿ ಶ್ರೀಕೃಷ್ಣಮೂರ್ತಿ ಪುದುಕ್ಕೋಳಿ,ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳಾದ ಕುಂಞಣ್ಣ ಬದಿಯಡ್ಕ, ಗಣೇಶ ಕೃಷ್ಣ ಅಳಕೆ ಉಪಸ್ಥಿತರಿದ್ದರು.

Post a Comment

0 Comments