Ticker

6/recent/ticker-posts

Ad Code

ಕೇರಳ ರಾಜ್ಯ ಶಾಲಾ ಕಲೋತ್ಸವ ; ಯಕ್ಷಗಾನ ಸ್ಪರ್ಧೆಯಲ್ಲಿ ಕಾಟುಕುಕ್ಕೆ ಶಾಲೆಗೆ ಹ್ಯಾಟ್ರಿಕ್ ಕಿರೀಟ

 

ಪೆರ್ಲ: ಕೇರಳ ರಾಜ್ಯ ಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಹೈಸ್ಕೂಲ್ ತಂಡ ಸತತ ಮೂರನೇ ಬಾರಿ ಪ್ರಥಮ‌ ಸ್ಥಾನವನ್ನು ಪಡೆದಿದೆ. ನಾಟ್ಯಗುರು ಬಾಲಕೃಷ್ಣ ಏಳ್ಕಾನ ನಿರ್ದೇಶಿಸಿದ್ದು, ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶರ್ಮ ಕಾಟುಕುಕ್ಕೆ, ಚೆಂಡೆ ವರ್ಷಿತ್ ಕೆಜ್ಜೆಕ್ಕಾರು, ಮದ್ದಳೆ ಶಿವಶಂಕರ ಭಟ್ ಅಂಬೆಮೂಲೆ, ಚಕ್ರತಾಳ ಬಾಲಕೃಷ್ಣ ಏಳ್ಕಾನ,  ವೇಷಭೂಷಣದಲ್ಲಿ ಮಲ್ಲ ಶ್ರೀ ದುರ್ಗಾಂಬ ಸಹಕರಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕ ಹರಿಪ್ರಸಾದ್ ಮಾಯಿಲೆಂಗಿ, ಚಂದ್ರಹಾಸ ಅರೆಕ್ಕಾಡಿ, ಶಿವರಾಮ ಅರೆಕ್ಕಾಡಿ ಸಹಕರಿಸಿದ್ದರು.

Post a Comment

0 Comments