Ticker

6/recent/ticker-posts

Ad Code

ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಉರುಳಿ ಬಿದ್ದ ವ್ಯಾನು

ಬೆಳ್ಳೂರು: ಚಾಲಕನ ನಿಯಂತ್ರಣ ತಪ್ಪಿದ ಇಕೋ ವ್ಯಾನ್ ಮನೆ ಮೇಲೆ ಉರುಳಿ ಬಿದ್ದು, ಮನೆ ಸಂಪೂರ್ಣ ಹಾನಿಯಾದ ಘಟನೆ ನೆಟ್ಟಣಿಗೆ ಪಡ್ಡಾಯಿಮೂಲೆಯಲ್ಲಿ ಗುರುವಾರ ಸಂಜೆ ನಡೆದಿದೆ. ಮುಳ್ಳೇರಿಯ ಕಿನ್ನಿಂಗಾರು ರಸ್ತೆಯ ಕಲ್ಲಗ ಜಂಕ್ಷನ್ ಪಡ್ಡಾಯಿ ಮೂಲೆಯಲ್ಲಿ ಮಾರುತಿ ಇಕೋ ವಾಹನ ರಸ್ತೆಯಿಂದ ಸುಮಾರು ಹತ್ತು ಅಡಿ ಕೆಳಗೆ ಸುರೇಶ್ ಎಂಬವರ ಮನೆಗೆ ಉರುಳಿ ಬಿದ್ದಿದೆ. ಕುಂಬ್ಡಾಜೆ ಕರುವಲ್ತಡ್ಕದ ಚಾಲಕ ಹಾಗೂ ಮನೆಯೊಳಗೆ ಮಲಗಿದ್ದ ಸುರೇಶ್ ರ ಪುತ್ರ ಸುನಿಲ್ ಗಾಯಗೊಂಡಿದ್ದಾರೆ. ಮನೆಯಲ್ಲಿದ್ದ ಇತರರು ಅಪಾಯದಿಂದ ಪಾರಾಗಿದ್ದಾರೆ. ಚಾಲಕ ನಿದ್ದೆ ಮಂಪರಿನಲ್ಲಿ ವ್ಯಾನ್ ಚಲಾಯಿಸಿದ್ದು ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ. ರಸ್ತೆಯಲ್ಲಿ ಆಗಮಿಸಿದ ಇತರರು, ಸ್ಥಳೀಯರು ಚಾಲಕನನ್ನು ವ್ಯಾನ್ ನಿಂದ ಹೊರ ತೆಗೆದು ಉಪಚರಿಸಿದ್ದಾರೆ. ಗಾಯಾಳುಗಳನ್ನು ಮುಳ್ಳೇರಿಯ ಆಸ್ಪತ್ರೆಗೆ ಸಾಗಿಸಲಾಗಿದೆ. ವ್ಯಾನ್ ಬಿದ್ದ ರಭಸಕ್ಕೆ ಮನೆ ಅಂಶಿಕ ಹಾನಿಯಾಗಿದೆ.

Post a Comment

0 Comments